ಸರಗೂರು: ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬರುತ್ತಿದ್ದೇವೆ. ಅದರ ಜೊತೆಯಲ್ಲಿ ಗ್ರಾಮದಲ್ಲಿ ವಯಸ್ಸಾದ ಹಿರಿಯರಿಗೆ ಸಹಾಯಧನ ಟ್ರಸ್ಟ್ ವತಿಯಿಂದ ಮಾಡುತ್ತಿದ್ದೇವೆ ಎಂದು ವಿಷ್ಣು ಸೇನಾ ಟ್ರಸ್ಟ್ ಅಧ್ಯಕ್ಷ ಬಿ.ವಿ.ರವಿ ತಿಳಿಸಿದರು.
ತಾಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಹಳ್ಳಿ ಗ್ರಾಮದಲ್ಲಿ ವಿಷ್ಣುಸೇನಾ ಟ್ರಸ್ಟ್ ವತಿಯಿಂದ ಗುರುವಾರದಂದು ವಿಷ್ಣು ಸೇನಾ ಟ್ರಸ್ಟ್ ಕಛೇರಿಯ ಕಟ್ಟಡದ ಗುದ್ದಲಿ ಪೂಜೆಯನ್ನು ಗ್ರಾಮದ ಯಜಮಾನರು ಮತ್ತು ಮುಖಂಡರು ನೆರವೇರಿಸಿದರು.
ಬಿದರಹಳ್ಳಿ ಗ್ರಾಮದಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಹುಟ್ಟುಹಬ್ಬ ಹಾಗೂ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಯುವಕರಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವ ನಿಟ್ಟಿನಲ್ಲಿ ಸಹಾಯ ಮಾಡಲು ನಮ್ಮ ಟ್ರಸ್ಟ್ ಸದಸ್ಯರು ಸಮ್ಮುಖದಲ್ಲಿ ಸಮಾಜ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಕಳೆದೆ ಐದು ವರ್ಷಗಳ ಹಿಂದೆ ಸಂಘ ಮಾಡಿಕೊಂಡು ವಿವಿಧ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸಿಕೊಂಡು ಹಾಗೂ ಗ್ರಾಮದ ಯಾವುದೇ ಜನಾಂಗದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಹಾಗೂ ಆರೋಗ್ಯದಲ್ಲಿ ಸಮಸ್ಯೆಯಲ್ಲಿ ಇದ್ದವರಿಗೂ ಟ್ರಸ್ಟ್ ವತಿಯಿಂದ ಸಹಾಯಧನವನ್ನು ನೀಡುತ್ತಿದ್ದೇವೆ ಎಂದರು.
ವಿಷ್ಣು ಅವರ ಹುಟ್ಟುಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಕ್ರಿಕೆಟ್ ಹಾಗೂ ವಾಲಿಬಾಲ್, ಕಬ್ಬಡಿ ಕ್ರೀಡಾಕೂಟ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅನ್ನದಾನ ಆಯೋಜಿಸಲಾಗುವುದು. ಈ ಟ್ರಸ್ಟ್ ನ್ನು ಬೆಳೆಸಿಕೊಂಡು ಜನರ ಸೇವೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮಸ್ಥರು ಈ ಕಾರ್ಯಗಳನ್ನು ನೋಡಿಕೊಂಡು ಗ್ರಾಮದ ಮುಖಂಡರು ವಿಷ್ಣು ಸೇನಾ ಟ್ರಸ್ಟ್ ಗೆ ಪುಟ್ಟ ಕಚೇರಿ ನಿರ್ಮಾಣ ಮಾಡಲು ಗ್ರಾಮದಿಂದ ಜಾಗವನ್ನು ನೀಡಿದ್ದಾರೆ. ಅದಕ್ಕೆ ಎಲ್ಲಾ ಜನಾಂಗದ ಮುಖಂಡರಿಗೆ ಟ್ರಸ್ಟ್ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಉಪಾಧ್ಯಕ್ಷ ಸೋಮಣ್ಣ, ಖಜಾಂಚಿ ಕುಮಾರ್, ಗೌರವಾಧ್ಯಕ್ಷ ಶಿವು, ಗ್ರಾಮದ ಯಜಮಾನರು ಅಂಕನಾಯಕ, ಸಣ್ಣನಾಯಕ, ಪುಟ್ಟಸಿದ್ದನಾಯಕ, ಚಂದ್ರಶೇಖರ್, ಮಲಿನಾಯಕ, ರಾಜು, ಶಿವಕುಮಾರ ಆರಾಧ್ಯರು, ಕೆಂಪನಾಯಕ, ರಾಜನಾಯಕ, ಜಾಣನಾಯಕ, ವೆಂಕಟನಾಯಕ, ಚನ್ನಪ್ಪ ಮತ್ತು ಚಿನ್ನಯ್ಯ, ವಿಷ್ಣುಸೇನಾ ಟ್ರಸ್ಟ್ ಪದಾಧಿಕಾರಿಗಳು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC