ತುಮಕೂರು: ಜಿಲ್ಲಾ ಆಡಳಿತದಿಂದ ದಸರಾ ಪ್ರಯುಕ್ತ ನಗರದಲ್ಲಿ ಭಾನುವಾರ ಮ್ಯಾರಥಾನ್ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಪುರುಷರ ವಿಭಾಗದಲ್ಲಿ ಬೆಂಗಳೂರಿನ ಅಬ್ದುಲ್ ಬಾರಿ, ಮಹಿಳೆಯರ ವಿಭಾಗದಲ್ಲಿ ಪ್ರಣತಿ ವೇಗದ ಓಟಗಾರರಾಗಿ ಹೊರ ಹೊಮ್ಮಿದರು.
ಪುರುಷರಿಗೆ 10 ಕಿಲೊ ಮೀಟರ್, ಮಹಿಳೆಯರಿಗೆ 5 ಕಿಲೊ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಜೂನಿಯರ್ ಕಾಲೇಜು ಮೈದಾನದಲ್ಲಿ ಓಟಕ್ಕೆ ಚಾಲನೆ ನೀಡಲಾಯಿತು. ಎರಡು ವಿಭಾಗದಲ್ಲಿ 480 ಕ್ರೀಡಾಪಟುಗಳು ಭಾಗವಹಿಸಿದ್ದರು.
ಪುರುಷರ ವಿಭಾಗದಲ್ಲಿ ಬೆಂಗಳೂರಿನ ಅಬ್ದುಲ್ ಬಾರಿ ಮೊದಲ ಸ್ಥಾನ ಪಡೆದರೆ, ಜಯಾಷ್ ಪಾಟೀಲ್ ಎರಡು, ತುಮಕೂರಿನ ಟಿ.ಎಸ್.ಸಂದೀಪ್ ಮೂರು, ಬೆಂಗಳೂರಿನ ಗೋಪಿ ನಾಲ್ಕು, ಬಾಗಲಕೋಟೆಯ ಸಂಗಮೇಶ್ ಹಳ್ಳಿ ಐದು ಹಾಗೂ ಬಾದಾಮಿಯ ಪ್ರಭು ಲಮಾಣಿ ಆರನೇ ಸ್ಥಾನ ಪಡೆದರು.
ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಪ್ರಣತಿ ಪ್ರಥಮ, ಸೀಮಾ ದ್ವಿತೀಯ, ಶಿವಮೊಗ್ಗದ ಎಚ್.ವಿ.ದೀಕ್ಷಾ ತೃತೀಯ, ಕೋಲಾರದ ಎಂ.ಸಾಹಿತ್ಯ ನಾಲ್ಕು, ಬೆಂಗಳೂರಿನ ಲಾವಣ್ಯ ಐದು ಮತ್ತು ತುಮಕೂರಿನ ಎ.ಆರ್.ಜೀವಿತ ಆರನೇ ಸ್ಥಾನ ತಮ್ಮದಾಗಿಸಿಕೊಂಡರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC