ಚಿಕ್ಕಬಳ್ಳಾಪುರ: ಬಟ್ಟೆ ಖರೀದಿ ನೆಪದಲ್ಲಿ ಬಂದು, ಚಿನ್ನ ಕದ್ದು ಪರಾರಿಯಾಗಿದ್ದ ಬುರ್ಖಾ ಧರಿಸಿದ್ದ ಮಹಿಳೆಯರ ಗ್ಯಾಂಗ್ ವೊಂದನ್ನು ಬಂಧಿಸುವಲ್ಲಿ ಚಿಂತಾಮಣಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೃತ್ಯ ನಡೆದ ವರ್ಷದ ನಂತರ ಆರೋಪಿಗಳನ್ನು ಸೆರೆಹಿಡಿಯಲಾಗಿದೆ. ನಗರದ ಸೌಂದರ್ಯ ಫ್ಯಾಷನ್ ಆ್ಯಂಡ್ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಕಳೆದ ವರ್ಷದ ಜುಲೈ ತಿಂಗಳಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ಜುವೆಲರ್ಸ್ ಮಾಲೀಕರು ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಚಿಂತಾಮಣಿ ನಗರ ಪೊಲೀಸರು, ಒಂದು ವರ್ಷದ ಬಳಿಕ ಮಾಲುಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.
ಬುರ್ಖಾ ಧರಿಸಿ ಬಂದಿದ್ದ ಮಹಿಳಾ ಗ್ಯಾಂಗ್ ಚಿನ್ನದ ಬಾಕ್ಸ್ ಕಳ್ಳತನ ಮಾಡಿ ಎಸ್ಕೇಪ್ ಆಗಿತ್ತು. ಎಪ್ಪತ್ತು ಗ್ರಾಂ ತೂಕದ 7 ಲಕ್ಷ ರೂ ಬೆಲೆ ಬಾಳುವ 16 ಜೊತೆ ಓಲೆ ಬಾಕ್ಸ್ ಕದ್ದಿರುವ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಕೋಲಾರ ಮೂಲದ ನಗ್ಮಾ, ಜರೀನಾ, ನಗೀನಾ, ನವೀನಾ, ಮುಬೀನಾ ಎಂಬ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಎಪ್ಪತ್ತು ಗ್ರಾಂ ತೂಕದ ಸುಮಾರು ಏಳು ಲಕ್ಷ ರೂಪಾಯಿ ಬೆಲೆಬಾಳುವ 16 ಓಲೆ ಬಾಕ್ಸ್ ಅನ್ನು ವಶಕ್ಕೆ ಪಡೆಯಲಾಗಿದೆ. ಕಳುವಾಗಿದ್ದ ಚಿನ್ನಾಭರಣಗಳನ್ನು ಅಂಗಡಿ ಮಾಲೀಕನಿಗೆ ಪೊಲೀಸರು ಹಿಂದಿರುಗಿಸಿರುವುದಾಗಿ ಎಸ್ ಪಿ ಮಾಹಿತಿ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC