ಪಾವಗಡ: ತಾಲ್ಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ ಮತ್ತು ಗಾಂಧಿ ಸ್ಮೃತಿ ಹಾಗೂ ಮದ್ಯಪಾನ ಮುಕ್ತರಿಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ರೈತ ಸಂಘದ ಅಧ್ಯಕ್ಷರಾದ ನರಸಿಂಹ ರೆಡ್ಡಿ ಉದ್ಘಾಟನೆ ಮಾಡಿದರು. ಬಳಿಕ ಯೋಜನೆ ಕಾರ್ಯಕ್ರಮಗಳು ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನ ಯೋಜನಾಧಿಕಾರಿಗಳಾದ ಮಹೇಶ್ ಹೆಚ್. ತಾಲೂಕಿನ ವ್ಯಾಪ್ತಿಯಲ್ಲಿ ನಮ್ಮೂರು ನಮ್ಮ ಕೆರೆ, ಜ್ಞಾನ ದೀಪ ಶಿಕ್ಷಕರ ನೀಡುವುದು, ಜ್ಞಾನ ವಿಕಾಸ ಕಾರ್ಯಕ್ರಮಗಳು, ನಗದರಲ್ಲಿ ಶುದ್ಧಗಂಗಾ ಘಟಕ ಸ್ಥಾಪನೆ, ಸದಸ್ಯರಿಗೆ ಆರೋಗ್ಯ ರಕ್ಷಾ ವಿಮಾ ಸೌಲಭ್ಯ ಹಾಗೂ ಶಾಲೆಗಳಿಗೆ ಡೆಸ್ಕ್ ಬೆಂಚ್ ವಾಟರ್ ಫಿಲ್ಟರ್ ವಿತರಣೆ ಹಾಲು ಉತ್ಪಾದಕ ಕಟ್ಟಡಗಳಿಗೆ ಮತ್ತು ದೇವಸ್ಥಾನ ಕಟ್ಟಡಗಳಿಗೆ ಅನುದಾನ ವಿತರಣೆ ಇನ್ನು ಹಲವಾರು ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಒಟ್ಟು 395 ಜನ ವಿದ್ಯಾರ್ಥಿಗಳಿಗೆ 2,40,000 ರೂ ಪ್ರತೀ ತಿಂಗಳು ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾಗಿದ್ದು, ಮಂಜೂರಾತಿ ಪತ್ರ ವಿತರಿಸಿದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಅಶ್ವಥ್ ಕುಮಾರ್, SSK ಸಂಘದ ಹಾಲಿ ನಿರ್ದೇಶಕ ರಾಜಗೋಪಾಲ್, ಲೋಕೇಶ್ ರತ್ನಮ್ಮ ಮತ್ತು ನವ ಜೀವನ ಸಮಿತಿ ಸದಸ್ಯರು, ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಸ್ವಸಹಾಯ ಸಂಘದ ಸದಸ್ಯರು ಮತ್ತು ಸೌಲಭ್ಯ ಪಡೆದುಕೊಳ್ಳುವ ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC