ಸರಗೂರು: ಪಟ್ಟಣದಲ್ಲಿ ಕ್ರೀಡಾ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ಆಯೋಜಿಸಲು ಬಾಲ್ ಫೀಲ್ಡ್ ನ್ನು ಹಸ್ತಾಂತರಿಸುವಂತೆ ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯಿತಿ, ಸರಗೂರು ರವರು ಕೋರಿರುತ್ತಾರೆ.
ಅದರಂತೆ ಈ ಬಗ್ಗೆ ಪರಿಶೀಲಿಸಲಾಗಿ, ಸದರಿ ಬಾಲ್ ಫೀಲ್ಡ್ ಸರಗೂರು ಸ.ನಂ. 1/1 ಮತ್ತು ಸ.ನಂ. 1/2 d ಜಮೀನಾಗಿರುತ್ತದೆ. ಸ.ನಂ. 1/1 ರಲ್ಲಿನ 7–19 ಎಕರೆ ಚನ್ನರಾಜೇ ಅರಸ್ ಬಿನ್ ವೀರರಾಜೇ ಅರಸ್ ರವರ ಹೆಸರಿನಲ್ಲಿ ಹಾಗೂ ಸರಗೂರು ಸ.ನಂ. 1/2 ರಲ್ಲಿನ 1-31 ಎಕರೆ ಜಮೀನು ಬ್ರಹ್ಮದೇವಯ್ಯ ಬಿನ್ ಬ್ರಹ್ಮದೇವಯ್ಯ ರವರ ಹೆಸರಿನಲ್ಲಿ ಖಾತೆ ದಾಖಲಾಗಿರುವುದು ಆರ್.ಟಿ.ಸಿ ಯಿಂದ ಕಂಡುಬಂದಿರುತ್ತದೆ.
ಮೇಲ್ಕಂಡ ಜಮೀನನ್ನು ಕ್ರೀಡಾಂಗಣಕ್ಕಾಗಿ ಕಾಯ್ದಿರಿಸುವ ಸಂಬಂಧ ಮೇಲ್ಕಂಡ ಜಮೀನಿನ ಖಾತೆದಾರರು ಅಥವಾ ವಾರಸುದಾರರು ದಿನಾಂಕ: 25—10–2025 ರ ಒಳಗೆ ಕಛೇರಿ ವೇಳೆಯಲ್ಲಿ ಸರಗೂರು ತಾಲ್ಲೂಕು ಕಛೇರಿಯ ತಹಶೀಲ್ದಾರ್ ರವರನ್ನು ಜಮೀನಿಗೆ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಸಂಪರ್ಕಿಸಲು ತಿಳಿಯಪಡಿಸಿದೆ. ತಪ್ಪಿದ್ದಲ್ಲಿ ನಿಯಮಾನುಸಾರ ಕ್ರಮವಹಿಸಲಾಗುವುದೆಂದು ಎಂದು ಸರಗೂರು ತಹಶೀಲ್ದಾರ್ ಮೋಹನಕುಮಾರಿ ತಿಳಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC