ಪಾವಗಡ: ತಾಲೂಕಿನ Y.N.ಹೊಸಕೋಟೆ ವಲಯದ ಶ್ರೀ ಚೌಡೇಶ್ವರಿ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಸಮಿತಿ ವತಿಯಿಂದ ಶ್ರೀ ಸತ್ಯನಾರಾಯಣ ಸ್ವಾಮಿ ಸಾಮೂಹಿಕ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಂಜಯ್ ಕುಮಾರನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಭಕ್ತಾದಿಗಳಿಗೆ ಆಶೀರ್ವಾದ ವಚನವನ್ನು ನೀಡಲಾಯಿತು.
ತಾಲೂಕಿನ ಯೋಜನಾಧಿಕಾರಿ ಮಹೇಶ್ ಹೆಚ್. ಸಭೆಯಲ್ಲಿ ಯೋಜನೆಯ ಕಾರ್ಯಕ್ರಮಗಳಾದ ಸ್ವಸಹಾಯ ಸಂಘಗಳ ರಚನೆ, ವಾರದ ಸಭೆ, ಗುಂಪು ಭದ್ರತೆ, ದಾಖಲಾತಿ ನಿರ್ವಹಣೆ ಹಾಗೂ ತಂಡಗಳಿಗೆ ಲಾಭಾಂಶ ವಿತರಣೆ, ಆರ್ಥಿಕ ಶಿಸ್ತು, ಜ್ಞಾನ ವಿಕಾಸ ಕೇಂದ್ರ, ನಮ್ಮೂರು ನಮ್ಮ ಕೆರೆ, ಸುಜ್ಞಾನ ಶಿಷ್ಯ ವೇತನ, ಜ್ಞಾನ ದೀಪ ಶಿಕ್ಷಕರು, ದೇವಸ್ಥಾನ ಹಾಲು ಉತ್ಪಾದಕ ಕಟ್ಟಡ ನಿರ್ಮಾಣಕ್ಕೆ ಅನುದಾನ, ಶಾಲೆಗಳಿಗೆ ಡೆಸ್ಕ್ ಬೆಂಚ್ ವಿತರಣೆ, ಕಾಂಪೌಂಡ್ ರಚನೆ, ಶೌಚಾಲಯ ಕಟ್ಟಡ, ವಾಟರ್ ಫಿಲ್ಲ್ಡ್ ವಿತರಣೆ, ಅಸಹಾಯಕ ವೃದ್ಧರಿಗೆ ಪ್ರತಿ ತಿಂಗಳು ಮಾಶಾಸನ ವಿತರಣೆ, ಒಟ್ಟು 520 ವಿವಿಧ ಸಲಕರಣೆಗಳು ವಿತರಣೆ, ಅಂಗವಿಕಲ ಫಲಾನುಭವಿಗಳಿಗೆ ನೆರವು ಮೊದಲಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದರು.
ಕಾರ್ಯಕ್ರಮದಲ್ಲಿ ಎಸ್.ಟಿ.ನಾಗರಾಜ್, ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎನ್.ಆರ್.ಅಶ್ವತ್ ಕುಮಾರ್, SSK ಸಂಘದ ನಿರ್ದೇಶಕರು ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಬಿ.ಎಲ್.ಸೋಮಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹೊಸಕೋಟೆ, ಸಂಶುದ್ದೀನ್ ವಿ. ಎಸ್ ಎಸ್.ಎನ್ ಮಾಜಿ ಅಧ್ಯಕ್ಷರು, ಜಿ.ಬಿ.ಸತ್ಯನಾರಾಯಣ ಶ್ರೀ ಚೌಡೇಶ್ವರಿ ಭವನ ಕಮಿಟಿ ಅಧ್ಯಕ್ಷರು, ಟಿ.ಎನ್.ಜಗನ್ನಾಥ ಅಧ್ಯಕ್ಷರು, ಮೇಲ್ವಿಚಾರಕರಾದ ಮೊಹಮ್ಮದ್ , ಲಕ್ಷ್ಮಣ್ ಹಾಗೂ ವಲಯದ ಸೇವಾ ಪ್ರತಿನಿಧಿಗಳು ಮತ್ತು ಪೂಜಾ ಸಮಿತಿ ಎಲ್ಲಾ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಒಕ್ಕೂಟ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಈ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC