ಸರಗೂರು: ಪ್ರತಿಯೊಬ್ಬರು ತಮ್ಮ ತಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಿ.ತಾವು ಮಾಡುವ ಕೆಲಸದ ಸ್ಥಳಗಳಲ್ಲಿ ತಮ್ಮ ಕಣ್ಣುಗಳನ್ನು ಆರೈಕೆ ಮಾಡಿಕೊಳ್ಳಿ. ಪ್ರತಿ 20 ನಿಮಿಷಗಳಿಗೊಮ್ಮೆ ಕಣ್ಣಿಗೆ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಕೆ.ಆರ್.ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಚೇತನ್ ಕುಮಾರ್ ತಿಳಿಸಿದರು.
ಪಟ್ಟಣದ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ವತಿಯಿಂದ, ವಿಶ್ವದೃಷ್ಟಿ ದಿನಾಚರಣೆ ಕಾರ್ಯಕ್ರಮವನ್ನು ಗುರುವಾರರಂದು ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಆಯೋಜಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾರಿನಂಶವಿರುವ ಸೊಪ್ಪು ಮತ್ತು ತರಕಾರಿಗಳನ್ನು ಸೇವಿಸಿ, ಪ್ರೋಟಿನ್ ಯುಕ್ತ ಸಮತೋಲನ ಆಹಾರವನ್ನು ಸೇವಿಸಿದರೆ ಕಣ್ಣಿಗೆ ರಕ್ಷಣೆ ಸಿಗುತ್ತದೆ. ನಾನು 2,800 ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಮಾಡಿರುತ್ತೇನೆ. ಒಂದೂ ಕೂಡ ಯಾವುದೇ ವೈಪಲ್ಯವಿಲ್ಲ ಎಂದು ಹೇಳಲಿಕ್ಕೆ ಇಚ್ಚಿಸುತ್ತೇನೆ ಎಂದರು.
ಆಸ್ಪತ್ರೆಯ ನಿರ್ದೇಶಕ ಡಾ ರವೀಂದ್ರನಾಥ್ ಮಾತನಾಡಿ, ನನ್ನ ಗುರುಗಳು ಈ ಆಸ್ಪತ್ರೆಯಲ್ಲಿ ನಾನು ಸೇವೆ ಮಾಡಲು ಸದಾ ನಿಮ್ಮೊಂದಿಗೆ ಸಿದ್ದನಿದ್ದೇನೆ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಮಕ್ಕಳ ಕಣ್ಣಿನ ಶಸ್ತ್ರ ಚಿಕಿತ್ಸಾ ತಜ್ಞರು, ವಿಠ ಇಂಟರ್ ನ್ಯಾಷಿನಲ್ ಇನ್‌ಸ್ಟಿಟ್ಯೂಟ್ ಆಫ್ ಆಪ್ತಾಲ್ಮೊಲಜಿ ಡಾ ನೇತ್ರಹರ್ಷ ಮಾತನಾಡಿ, ಕಣ್ಣು ಸೂಕ್ತವಾದ ಅಂಗ ಅದನ್ನು ಜೋಪಾನವಾಗಿ ನೋಡಿಕೊಳ್ಳಬೇಕು, ಕಣ್ಣಿನ ಪೊರೆ, ಗ್ಲಾಕೋಮ ಇವುಗಳಿಗೆ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಮಗುವಿಗೆ 1 ವರ್ಷವಾದ ನಂತರ ಕಣ್ಣಿನ ತಪಾಸಣೆ ಮಾಡಿಸಿದರೆ ಮಗುವಿನ ಮುಂದಿನ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಧೂಳುಗಳು ಬರದೆ ಹಾಗೆ ನಿಯಂತ್ರಿಸಲು ಸೂಕ್ತವಾದ ಕನ್ನಡಕಗಳನ್ನು ಬಳಸಬೇಕು ಎಂದರು.
ಕಣ್ಣಿನ ನರರೋಗ ತಜ್ಞ ಡಾ.ವಿನಯ್ ಕುಮಾರ್ ಇವರು ಮಾತನಾಡಿ, ನಮ್ಮ ಕಣ್ಣಿನ ಆರೈಕೆ ನಾವೇ ಮಾಡಿಕೊಳ್ಳಬೇಕು. ಪ್ರತಿಯೊಬ್ಬರು 40 ವರ್ಷ ಆದ ನಂತರ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಗ್ರಾಮೀಣ ಮಟ್ಟದಲ್ಲಿ ಇಂತಹ ಸೇವಾ ಆಸ್ಪತ್ರೆ ಇರೋದು ನಮ್ಮೆಲ್ಲರ ಪುಣ್ಯ. ವಿಶ್ವ ಸಂಸ್ಥೆಯ ಈ ವರ್ಷ ಘೋಷಿಸಿರುವ ಘೋಷವಾಕ್ಯವಾದ “ ಪ್ರತಿ ಕತೆಯನ್ನು ಲೆಕ್ಕಿಸದೇ ನಿಮ್ಮ ಕಣ್ಣನ್ನು ಪ್ರೀತಿಸಿ” ಎಂಬುದರ ಬಗ್ಗೆ ಹೇಳುತ್ತಾ ಕಣ್ಣಿನ ದೋಷ ನಿಯಂತ್ರಿಸಲು ಹಲವಾರು ಕಾರ್ಯ ಕ್ರಮಗಳನ್ನು ವಿವೇಕಾನಂದ ಸ್ಮಾರಕ ಆಸ್ಪತ್ರೆಯು ಕಣ್ಣಿನ ತಪಾಷಣೆ ಶಿಬಿರಗಳನ್ನು ಅಯೋಜಿಸಿ ಕಣ್ಣಿನ ತೊಂದರೆ ಇರುವವರನ್ನು ಗುರುತಿಸಿ ಶಸ್ತç ಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಇಂತಹ ಶಿಬಿರಗಳನ್ನು ಸಾರ್ವಜನಿಕರು ಹೆಚ್ಚು ಉಪಯೋಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಡಾ.ರವೀಂದ್ರನಾಥ್ ಶ್ರಾಫ್ ಮಾತನಾಡುತ್ತ ಡಯಬಿಟಿಕ್ ರೆಟಿನೋಪತಿ ಮತ್ತು ಮಕ್ಕಳ ಕಣ್ಣಿನ ಚಿಕಿತ್ಸೆ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಿ ಅಂಧತ್ವದಿಂದ ಬೆಳಕಿನೆಡೆಗೆ ತರಲು ನಮ್ಮ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ವೈದ್ಯರ ತಂಡ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು .
ಕಾರ್ಯಕ್ರಮದಲ್ಲಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ವ್ಯವಸ್ಥಾಪಕರ ಸಂಧ್ಯ ಬಿ.ಜಿ, ವೈದ್ಯರು ಡಾ ಸುಷ್ಮವೈದ್ಯನಾಥ್, ಪ್ರಸೂತಿ ಮತ್ತು ಸ್ರೀ ರೋಗ ತಜ್ಞೆ ಡಾ.ನಿಸರ್ಗ, ಡಾ.ಗಣೇಶ್, ಡಾ.ಪ್ರಶಾಂತ್‌ಬಿಂಜಲ್ ಬಾವಿ, ಡಾ.ಅಜುನ್ ಎಸ್. ಪ್ರಕಾಶ್, ಪುಟ್ಟಮ್ಮ, ಅಪ್ರೋಶ್ ಪಾಷ, ಬಂಗಾರಶೆಟ್ಟಿ, ಗೋಪಾಲಕೃಷ್ಣ ರೂಪೇಶ್, ಮಮತ, ದೀಪಿಕ, ಸ್ಪೂರ್ತಿ ಶ್ಯಾಮಲ, ಸಿಂಚನ, ಸುಧರಾಣಿ, ಪದ್ಮಚಂದ್ರ, ನವೀನ್‌ಕುಮಾರ್, ಅನಿತ, ರುಚಿತ, ನಂಜುಂಡಸ್ವಾಮಿ, ಮಂಜುಳ, ರಾಜು, ಸಿಬ್ಬಂದಿವರ್ಗದವರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC