ಪಾವಗಡ: ತಾಲೂಕಿನ ವೆಂಕಟಾಪುರ ಗ್ರಾಮದ ನಾಗಶಂಕರ್ ಅವರಿಗೆ ಕರುನಾಡ ರತ್ನ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಗುರುವಾರ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ “ಶಕ್ತಿ ಅಸ್ತ್ರ ಮೀಡಿಯಾ ಕ್ರಿಯೆಷನ್” ಪತ್ರಕರ್ತರ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯಿತು.
ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಮದ ನಾಗಶಂಕರ್ ಕರ್ನಾಟಕ ಹಾಗೂ ಆಂಧ್ರದ ಗಡಿನಾಡ ಕನ್ನಡಿಗರು ಮತ್ತು “ಕವಿ ಶಂಕರ್” ಎಂದೇ ಗುರುತಿಸಿ ಕೊಂಡವರು. ಪ್ರೌಢ ಶಿಕ್ಷಣ ವ್ಯಾಸಂಗದ ಅವಧಿಯಿಂದಲೂ ಸಾಹಿತ್ಯ ಆಸಕ್ತಕರಾಗಿದ್ದು, ಪ್ರಸ್ತುತ ತಮ್ಮ ವೃತ್ತಿ ಜೀವನವನ್ನು (VRL) ಬೆಂಗಳೂರಿನ ವಿ. ಆರ್.ಎಲ್. ಸಮೂಹ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಸಾಹಿತ್ಯ ಕೃಷಿಯಲ್ಲೂ ಉತ್ತಮ ಸಾಧನೆಮಾಡಿದ್ದಾರೆ.
ಇವರು ಬರೆದಿರುವ ಅನೇಕ ಕವನಗಳು ರಾಜ್ಯ ಮಟ್ಟದ ಕವನ ಸಂಕಲನಗಳಲ್ಲಿ ಆಯ್ಕೆಯಾಗಿ ಮುದ್ರಣ ಗೊಂಡಿರುತ್ತವೆ. ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿದ ಕರ್ನಾಟಕದ ಹಲವು ಜಿಲ್ಲೆಯ ಕನ್ನಡಪರ ಸಂಘ — ಸಂಸ್ಥೆಗಳು ಅವರಿಗೆ ಜಿಲ್ಲಾ ಹಾಗು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಿದೆ.
ಗುರುವಾರ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ “ಶಕ್ತಿ ಅಸ್ತ್ರ ಮೀಡಿಯಾ ಕ್ರಿಯೆಷನ್” ಪತ್ರಕರ್ತರ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ನಾಗಶಂಕರ್ ಅವರಿಗೆ ಕರುನಾಡರತ್ನಶ್ರೀ 2025 ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC