ಬೀದರ್ : ಬಿಜೆಪಿಯು ಗುಜರಾತ್ ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರ್ತಿಯನ್ನು 3 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದೆ. ಆದರೆ, ವಲ್ಲಭಭಾಯಿ ಪಟೇಲ್ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಗೃಹಮಂತ್ರಿಯಾಗಿದ್ದಾಗ ಆರೆಸ್ಸೆಸ್ ಅನ್ನು ಎರಡು ಸಲ ನಿಷೇಧಿಸಿದ್ದರು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಹೇಳಿದ್ದಾರೆ.
ಇಂದು ಬೀದರ್ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಆರೆಸ್ಸೆಸ್ ಅನ್ನು ನಿಷೇಧ ಮಾಡಿದ್ದು, ಈ ಬಿಜೆಪಿಗರು ಮರೆತಿದ್ದಾರೆ. ಅವರಿಗೆ ಅದನ್ನು ನೆನಪಿಸಬೇಕು ಎಂದರು.
ದೇಶ ಪ್ರೀತಿಸುವವರೆಲ್ಲ ಆರೆಸ್ಸೆಸ್ ಪ್ರೀತಿಸುತ್ತಾರೆ ಎನ್ನುವ ಪೋಸ್ಟರ್ ಅಂಟಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಏನಾದರು ಅಂಟಿಸಲಿ, ದೇಶಪ್ರೇಮ ಎನ್ನುವುದು ಪ್ರತಿಯೊಬ್ಬ ಭಾರತೀಯ ಪ್ರಜೆಗಳಲ್ಲೂ ಇದೆ. ಆರೆಸ್ಸೆಸ್ ನವರಿಗೆ ಎಕ್ಸ್ಟ್ರಾ ದೇಶಪ್ರೇಮ ಇರುವುದಿಲ್ಲ. ಭಾರತದಲ್ಲಿರುವ 145 ಕೋಟಿ ಜನರೂ ಕೂಡ ದೇಶಪ್ರೇಮಿಗಳೇ ಎಂದು ಹೇಳಿದರು.
ನಮ್ಮ ಗ್ಯಾರಂಟಿಗಳನ್ನೇ ಮೋದಿಯವರು ಎಲ್ಲ ಕಡೆಗೆ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಗ್ಯಾರಂಟಿಗಿಂತ ಒಳ್ಳೆ ಕಾರ್ಯಕ್ರಮ ಈ ದೇಶದಲ್ಲಿ ಯಾವುದಿದೆ ಎಂದು ಪ್ರಶ್ನಿಸಿದ ಅವರು, ಮೋದಿಯವರು ಬಿಹಾರ ಚುನಾವಣೆಯಲ್ಲಿ ಮಹಿಳೆಯರ ಒಂದು ಓಟಿಗೆ 10 ಸಾವಿರ ರೂ. ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂದರ್ಭದಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮತ್ತು ಪೌರಾಡಳಿತ ಸಚಿವ ರಹೀಮ್ ಖಾನ್ ಸೇರಿದಂತೆ ಇತರರು ಇದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC