ಸರಗೂರು: ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಗುರುವಾರ ಜಮೀನಿನಲ್ಲಿ ಹುಲಿ ದಾಳಿಗೆ ಗಾಯಗೊಂಡ ರೈತ ಮಹದೇವಗೌಡ ಅವರ ಮನೆಗೆ ಶುಕ್ರವಾರದಂದು ಸಮಾಜ ಸೇವಕ ಹಾಗೂ ಜೆಡಿಎಸ್ ಪಕ್ಷದ ಮುಖಂಡ ಕೃಷ್ಣನಾಯಕ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸಹಾಯಧನ ನೀಡಿದರು.
ನಂತರ ಮಾತನಾಡಿದ ಅವರು ತಾಲೂಕಿನಲ್ಲಿ ಇಂತಹ ಘಟನೆಗಳು ನಡೆಯಬಾರದಿತ್ತು. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯದಿಂದಾಗಿ ನಡೆದಿದೆ. ಬಡಕುಟುಂಬದ ವ್ಯಕ್ತಿ ಮನೆಯ ಸಂಸಾರವನ್ನು ಹೊತ್ತುಕೊಂಡು ಜೀವನ ಮಾಡುತ್ತಿದ್ದ. ಈಗ ಹುಲಿ ದಾಳಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರಲ್ಲದೇ ಸ್ಥಳದಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮೂಲಕ ಮಾತನಾಡಿ, ಮಹದೇವಗೌಡರವರಿಗೆ ನಿಮ್ಮ ಇಲಾಖೆಯಿಂದ ಚಿಕಿತ್ಸೆ ಕೊಡಿಸಲು ಮುಂದಾಗಬೇಕು. ಅದರಂತೆ ಸರ್ಕಾರದಿಂದ ಏನೆಲ್ಲ ಸೌಲಭ್ಯಗಳು ಇವೆಯೋ ಅವುಗಳನ್ನು ಅವರಿಗೆ ನೀಡಬೇಕು ಎಂದು ತಿಳಿಸಿದರು.
ನಾನು ಕೂಡಾ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರವರನ್ನು ಭೇಟಿ ಹಾಗೂ ಕರೆ ಮೂಲಕ ಮಾತನಾಡಿ, ಕಾಡಂಚಿನ ಭಾಗದಲ್ಲಿರುವ ಗ್ರಾಮಗಳಿಗೆ ರೈಲು ಕಂಬಿಗಳು ಶೀಘ್ರದಲ್ಲೇ ಅಳವಡಿಸಲು ಸರ್ಕಾರ ಮಟ್ಟದಲ್ಲಿ ಬಿಡುಗಡೆ ಮಾಡಿಸಬೇಕು ಎಂದು ಶಿಫಾರಸು ಮಾಡುತ್ತಾನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಸುಧೀರ್ ಗೌಡ, ಉಪಾಧ್ಯಕ್ಷ ಬಿ.ಜೆ.ಆಶೋಕ್ ಕುಮಾರ್, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ, ಒಕ್ಕಲಿಗ ಸಂಘದ ನಿರ್ದೇಶಕ ಬಿ ರವಿ,ಬಿ ಕೆ ಜಯಶಂಕರ್,ಗ್ರಾಪಂ ಸದಸ್ಯರು ಗಂಗಾಧರ್, ರಾಮಚಂದ್ರ, ರಮೇಶ್, ಬಿ.ಎಸ್. ನಿಂಗರಾಜು, ಬಿ.ಕೆ.ಸಿದ್ದರಾಜು, ಕೆ.ಟಿ.ಮಹದೇವಸ್ವಾಮಿ, ಮುಖಂಡರು ವಾಲ್ಮೀಕಿ ಸಿದ್ದರಾಜು, ಚರಣ್, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC