ತುಮಕೂರು: ಅಕ್ಷರ ಚಪ್ಪರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವದ ಸಲುವಾಗಿ ಮಕ್ಕಳೇ ಮಕ್ಕಳಿಗಾಗಿ ನಡೆಸಿಕೊಡುವ ‘ಚಿಣ್ಣರ ಚಪ್ಪರ’ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಈ ಬಾರಿ ತುಮಕೂರಿನ ಕನ್ನಡ ಭವನದಲ್ಲಿ ದಿನಾಂಕ 22/11/2025ರ ಶನಿವಾರ ಬೆಳಿಗ್ಗೆ 9ರಿಂದ ಸಂಜೆ ಐದು ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು, ತುಮಕೂರಿನ ಹಾಗೂ ರಾಜ್ಯದ ಎಲ್ಲಾ ಮಕ್ಕಳು ಈ ಸಂಭ್ರಮದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆಯಲು ಆಯೋಜಕರು ಮನವಿ ಮಾಡಿಕೊಂಡಿದ್ದಾರೆ.
ಮಕ್ಕಳಲ್ಲಿ ಇರುವ ಕೌಶಲ್ಯವನ್ನು ತೋರಿಸಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಅಲ್ಲದೇ, ಕಲೆ, ಕನ್ನಡ, ಮಾನಸಿಕ ಆರೋಗ್ಯ, ಕನ್ನಡದ ಆಟೋಟ, ಹೀಗೆ ಹಲವು ವಿಭಿನ್ನ ವಿಭಾಗಗಳಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುವಂತೆ ಕಾರ್ಯಕ್ರಮ ರೂಪಿಸಲಾಗುತ್ತದೆ.
ನೃತ್ಯ, ಹಾಡುಗಾರಿಕೆ, ಚಿತ್ರ ಬಿಡಿಸುವುದು, ಭಾಷಣ ಇನ್ನು ಇತ್ಯಾದಿ ಅಭಿರುಚಿಗಳು ನಿಮ್ಮ ಮಕ್ಕಳಲ್ಲಿದ್ದರೆ, ದೂರವಾಣಿ ಸಂಖ್ಯೆ : 6360497877ಕ್ಕೆ ಕರೆ ಮಾಡಿ ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ. ನೋಂದಣಿ ಶುಲ್ಕ ಕೇವಲ 50 ರೂ.ಗಳು ಮಾತ್ರ ಎಂದು ಆಯೋಜಕರಾದ ಹೇಮಲತಾ ಜೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC