ಕೊರಟಗೆರೆ : ಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಧೋರಣೆ ಹಾಗೂ ರೈತರ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಬೇಸತ್ತು 6 ಜನ ನಿರ್ದೇಶಕರು ರಾಜೀನಾಮೆ ನೀಡಿರುವುದು ಬೆಳಕಿಗೆ ಬಂದಿದೆ.
ತಾಲೂಕಿನ ಮಾವತ್ತೂರು ಗ್ರಾಮದಲ್ಲಿರುವ ವಿಎಸ್ ಎಸ್ ಎನ್ ಸಂಘದಲ್ಲಿ ಒಟ್ಟು 14 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ. 2024 ರಿಂದ ಈಗಿನ ಕಮಿಟಿ ಅಸ್ತಿತ್ವಕ್ಕೆ ಬಂದಿದ್ದು, ರೈತರಿಗೆ 2019ರಲ್ಲಿ ಕೆಸಿಸಿ ಸಾಲ ಹೊರೆತು ಪಡಿಸಿದರೆ ಇಲ್ಲಿಯವರೆಗೂ ಬೇರೆ ಯಾವುದೇ ಸಾಲ ಸೌಲಭ್ಯ ಗೋಬ್ಬರು, ವಾಹನ ಸಾಲ, ಬೀದಿಬದಿಯ ವ್ಯಾಪಾರಸ್ಥರಿಗೆ ಸಾಲವನ್ನ ನೀಡಿಲ್ಲ. ಈಗಿನ ಹಾಲಿ ಅಧ್ಯಕ್ಷರು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರ ಬಗ್ಗೆ ಮಾತಾಡಿದ ಪರಿಣಾಮ ಹಾಗೂ ಅವರ ಧೋರಣೆಯಿಂದಾಗಿ ಗ್ರಾಮೀಣ ಭಾಗದ ರೈತರಿಗೆ ನೀಡಬೇಕಾದ ಸೌಲಭ್ಯವನ್ನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ರಾಜಿನಾಮೆ ನೀಡಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಅ.13ರಂದು ಮಂಜುನಾಥ್, ನವೀನ್ ಕುಮಾರ್, ಭಾಗ್ಯಸಿದ್ದಲಿಂಗಯ್ಯ, ಪಾರ್ವತಮ್ಮ 4 ಜನ ನಿರ್ದೇಶಕರು ರಾಜಿನಾಮೆ ಸಲ್ಲಿಸಿದ್ದಾರೆ. ಅ.14 ರಂದು ಕೃಷ್ಣಪ್ಪ, ಮುತ್ತರಾಜು, ಇಬ್ಬರು ರಾಜಿನಾಮೆ ಸಲ್ಲಿಸಿದ್ದಾರೆ. ಒಟ್ಟು ೪ ಜನ ಪುರುಷರು ಹಾಗೂ ಇಬ್ಬರು ಮಹಿಳೆಯರು ರಾಜಿನಾಮೆಯನ್ನ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರಿಗೆ ನೀಡಿದ್ದಾರೆ.
ರಾಜೀನಾಮೆ ನೀಡಿದ ನಿರ್ದೇಶಕ ಮಾವತ್ತೂರು ಮಂಜುನಾಥ್ ಮಾತನಾಡಿ ಈಗಿನ ಅಧ್ಯಕ್ಷರಾದ ಧನಂಜಯ ಅವರು ರಾಜ್ಯಕ್ಕೆ ಸಹಕಾರ ರತ್ನ ಎಂದು ಹೆಸರು ಪಡೆದಿರುವ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರ ಬಗ್ಗೆ ಕೇವಲವಾಗಿ ಮಾತನಾಡಿ ನಮ್ಮ ಸಂಘಕ್ಕೆ ಇಲ್ಲಿಯವರೆಗೂ ಯಾವುದೇ ಸಾಲವನ್ನ ರೈತರಿಗೆ ಕೊಡಲು ಆಗುತ್ತಿಲ್ಲ. ರೈತರಿಗೆ ಸಹಕಾರ ಸಂಘದಿಂದ ಸಿಗುವ ಎಲ್ಲಾ ಸೌಲಭ್ಯವನ್ನ ನೀಡುತ್ತೇವೆ ಎಂದು ಹೋಗಿ ಏನು ಮಾಡಲಿಲ್ಲ ಎಂದು ಹೇಗೆ ಅದರಿಂದ ಮನಸ್ಸಿಗೆ ನೋವಾಗಿ ಆರು ಜನ ನಿರ್ದೇಶಕರು ರಾಜೀನಾಮೆ ನೀಡಿದ್ದೇವೆ ಎಂದು ತಿಳಿಸಿದರು.
ಮಾವತ್ತೂರು ವಿಎಸ್ ಎಸ್ ಎನ್ ಅಧ್ಯಕ್ಷ ಧನಂಜಯ ಮಾತನಾಡಿ, ನಮ್ಮ ನಿರ್ದೇಶಕರು ರಾಜೀನಾಮೆ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಸಂಘದ ಕಚೇರಿಗೆ ಹೋಗಿ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಮೇಲ್ವಚಾರಕ ಬೋರಣ್ಣ ಮಾತನಾಡಿ ಸಂಘದ 6 ಜನ ನಿರ್ದೇಶಕರು ಅ.13, 4 ಜನ ಹಾಗೂ 14ರಂದು ಇಬ್ಬರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ವಾಪಾಸ್ ಪಡೆಯಲು 15 ದಿನ ಕಾಲಾವಕಾಶ ನೀಡಲಾಗುತ್ತದೆ. ಯಾರು ನಾಮಪತ್ರ ವಾಪಾಸ್ ಪಡೆಯದಿದ್ದಲ್ಲಿ ನಂತರ ಸಂಘದ ನಿರ್ದೇಶಕರ ಸಭೆಯನ್ನ ಕರೆಯಲಾಗುತ್ತದೆ. ಸಭೆಯಲ್ಲಿ ರಾಜೀನಾಮೆಯ ಅಂಗೀಕಾರ ಮಾಡಿದ ನಂತರ ಮೂರು ಸಭೆಯನ್ನ ಕರೆಯಲಾಗುವುದು ಮೂರು ಸಭೆಯಲ್ಲೂ ಬಹುಮತ ಇಲ್ಲದಿದ್ದರೆ ಸಂಘವನ್ನ ವಜಾಗೊಳಿಸಿ ಸಹಕಾರ ಇಲಾಖೆಯಿಂದ ವಿಶೇಷ ಅಧಿಕಾರಿಗಳನ್ನ ನೇಮಕ ಮಾಡಲಾಗುತ್ತದೆ ಎಂದರು.
ಮಾವತ್ತೂರು ಸೊಸೈಟಿ ಸೂಪರ್ ಸೀಡ್…?
ಮಾವತ್ತೂರು ಗ್ರಾಮದ ವಿಎಸ್ ಎಸ್ ಎನ್ ಸಂಘದ ಅಧ್ಯಕ್ಷರ ಮೇಲೆ ವೈಮನಸ್ಸಿನಿಂದ ನಿರ್ದೇಶಕರಲ್ಲಿ 6 ಜನ ಸಾಮೂಹಿಕ ರಾಜೀನಾಮೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಿರ್ದೇಶಕರು ರಾಜೀನಾಮೆ ನೀಡುವ ಸಾಧ್ಯತೆ. ಇನ್ನೂ ಒಬ್ಬ ನಿರ್ದೇಶಕರ ರಾಜೀನಾಮೆ ನೀಡಿದರೆ ಸೊಸೈಟಿ ಸೂಪರ್ ಸೀಡ್ ಆಗುವ ಸಾಧ್ಯತೆ..?
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC