ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ಜೋಜನಾ ಗ್ರಾಮದ ರೈತ ಹಣಮಂತ ಗಣಪತಿ ರಾಘೋಳೆ ಎಂಬುವವರಿಗೆ ಸೇರಿದ ರಾಶಿ ಮಾಡಲು ಕೂಡಿಟ್ಟ ಸೋಯಾ ಬಣವಿಗೆ ದುಷ್ಕರ್ಮಿಗಳು ಗುರುವಾರ ಸಂಜೆ 8 ಗಂಟೆ ಸುಮಾರಿಗೆ ಬೆಂಕಿಯಿಟ್ಟಿದ್ದಾರೆ.
ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬಣಮೆಗೆ ಕಿಡಿ ಇಟ್ಟ ಪರಿಣಾಮ 4 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸುಮಾರು 30 ಕ್ವಿಂಟಾಲ್ ಗಿಂತಲೂ ಹೆಚ್ಚಿನ ಫಸಲು ಬರುವ ಅಂದಾಜು ₹1.50 ಲಕ್ಷ ಮೌಲ್ಯದ ಬೆಳೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ರೈತ ಹನುಮಂತ್ ರಾಗೋಳೆ ಅವರು ಜೋಜನಾ ಗ್ರಾಮದ ನಿವಾಸಿಯಾಗಿದ್ದು, ಗ್ರಾಮ ಪಕ್ಕದ ಲಿಂಗದಳ್ಳಿ (ಕೆ) ಗ್ರಾಮದ ಸರ್ವೇ ನಂ–19 ರಲ್ಲಿ ಬೆಳೆದಿದ್ದ ಸೋಯಾಅವರೆ ಕಟಾವಿ ಮಾಡಿ ಸಂಗ್ರಹಿಸಿ ಬಣವಿಗೆ ಬೆಂಕಿ ಇಡಲಾಗಿದೆ.
ಸೋಯಾಅವರೆ ಬಣವಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಅಗ್ನಿಗೆ ಸುಟ್ಟು ಕರಕಲಾದ ಸೋಯಾ ಬೆಳೆಯ ಪರಿಹಾರ ನೀಡಬೇಕಾಗಿ ರೈತರು ಮನವಿ ಮಾಡಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



