ಸರಗೂರು: ಸರ್ಕಾರ ಹಕ್ಕು ಪತ್ರ ನೀಡಿದೆ, ತಾಲೂಕು ಆಡಳಿತ ತಡೆಹಿಡಿದಿದ್ದಾರೆ. ಕೇಳಿದರೂ ಶಾಸಕರು ಮೇಲೆ ಹೇಳುತ್ತಾರೆ ಅವರನ್ನು ಕೇಳಿದರೆ, ಇವರಿಗೆ ಹೇಳುತ್ತಿದ್ದಾರೆ ನಮ್ಮ ಸಮಸ್ಯೆ ಯಾರಿಗೆ ಹೇಳಬೇಕೋ ನಮ್ಮ ಗೊತ್ತಾಗುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಗ್ರಾಮೀಣ ಮಹೇಶ್ ಕಿಡಿಕಾರಿದರು.
ಸರಗೂರು ತಾಲೂಕಿನ ಹೊಸಬೀರ್ವಾಳು ಗ್ರಾಮಸ್ಥರು ಶುಕ್ರವಾರದಂದು ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಹಕ್ಕುಪತ್ರ ವಿತರಣೆ ಮಾಡಲು ತಡವಾಗಿರುವುದನ್ನು ಖಂಡಿಸಿ, ಸರಗೂರು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರು ಮಾತನಾಡಿದರು.
ನಮ್ಮ ತಾತ ತಂದೆ ಕಾಲದ ಗಾದೆ ಇದೆ “ದೇವರು ವರ ಕೊಟ್ಟರು ಪೂಜಾರಿ ಕೊಡುತ್ತಿಲ್ಲ” ಗಾದೆ ಸುಳ್ಳಾಗದು ಅಂತೆಯೇ ಕಂದಾಯ ಇಲಾಖೆ ಅಧಿಕಾರಿಗಳು ಅದನ್ನು ನಿಜಾ ಮಾಡಿ ತೋರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಬಿಜಾಪುರದಲ್ಲಿ ನಡೆದ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಮುತುವರ್ಜಿ ವಹಿಸಿ 1,11,111 ಹಕ್ಕು ಪತ್ರಗಳನ್ನು ವಿತರಿಸಿದೆ. ಅದರಲ್ಲಿ ಸರಗೂರು ತಾಲೂಕು ಹೊಸಬೀರ್ವಾಳು ಗ್ರಾಮದ 120 ಹಕ್ಕುಪತ್ರಗಳು ಸಹ ಒಳಗೊಂಡಿದೆ. ಸರ್ಕಾರಿ ಲೆಕ್ಕದಲ್ಲಿ ಈಗಾಗಲೇ ನಮಗೂ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಆದರೆ ಹಕ್ಕು ಪತ್ರಗಳು ಹೊಸಬೀರ್ವಾಳು ಗ್ರಾಮದ ಜನರಿಗೆ ತಲುಪಿಲ್ಲ. ಬಿಜಾಪುರದಲ್ಲಿ ವಿತರಿಸಲಾಗುತ್ತದೆ ಫಲಾನುಭವಿಗಳು ಸಿದ್ದರಾಗಿ ಎಂದು ತಾಲೂಕು ಆಡಳಿತ ಹೇಳಿತು ಅದರಂತೆ ಸಾರ್ವಜನಿಕರು ಸಹ ಸಿದ್ಧವಾಗಿದ್ದರು. ಆದರೆ ತಾಲೂಕು ಆಡಳಿತ ವ್ಯವಸ್ಥೆಯನ್ನು ಮಾಡಲಿಲ್ಲ. ನಂತರ ಕಳೆದ ಆಗಸ್ಟ್ 15 ಸ್ವತಂತ್ರ ದಿನಾಚರಣೆ ಸಮಾರಂಭದಲ್ಲಿ ಹಕ್ಕುಪತ್ರ ವಿತರಿಸುತ್ತೇವೆ ಗ್ರಾಮಸ್ಥರೆಲ್ಲ ಬನ್ನಿ ಎಂದು ಕರೆದಿದ್ದರು, ಅಂದೂ ವಿತರಣೆ ಮಾಡಲಿಲ್ಲ. ಕಳೆದ ತಿಂಗಳು 13ನೇ ತಾರೀಖಿನಂದು ಶಾಸಕರ ನೇತೃತ್ವದಲ್ಲಿ ಹಕ್ಕುಪತ್ರ ನೀಡುತ್ತೇವೆ ಬನ್ನಿ ಎಂದಿದ್ದರು ಅಂದು ಸಹ ನಿರಾಸೆಯಾಯಿತು ಎಂದರು.
ಅ. 24ರಂದು ಶಾಸಕರ ಜನಸ್ಪಂದನ ಕಾರ್ಯಕ್ರಮವಿದೆ, ಎಲ್ಲರೂ ಬನ್ನಿ ಹಕ್ಕುಪತ್ರಗಳನ್ನ ವಿತರಿಸುತ್ತೇವೆ ಎಂದಿದ್ದರು. ಇಂದು ಸಹ ನಮಗೆ ನಿರಾಸೆಯಾಗಿದೆ. ಶಾಸಕರು ಜನ ಸ್ಪಂದನ ಕಾರ್ಯಕ್ರಮವನ್ನು ಮುಂದೂಡುತ್ತಿರುವ ಕಾರಣದಿಂದ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿಲ್ಲ ಎಂದು ತಹಶೀಲ್ದಾರ್ ರವರು ಶಾಸಕರ ಕಡೆ ಬೆಟ್ಟು ಮಾಡಿ ತೋರಿಸುತ್ತಾ, ನವೆಂಬರ್ 1ನೇ ತಾರೀಖಿನಂದು ಎಲ್ಲರೂ ಬನ್ನಿ ತಪ್ಪದೇ ವಿತರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಇವರ ಮಾತನ್ನು ನಂಬುವುದು ಹೇಗೆ ಅಂತ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಚನ್ನನಾಯಕ, ಮಹಲಿಂಗ, ಮಹದೇವಶಟ್ಟಿ, ಚಿಕ್ಕಶಟ್ಟಿ, ಗೋಪಾಲಚಾರಿ, ಶಿವಕುಮಾರ್, ನಿಂಗಮ್ಮ, ಲಕ್ಷ್ಮಮ್ಮ, ಜಯಪ್ಪ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



