ಸರಗೂರು: ನಮ್ಮ ಹಲಸೂರು ಗ್ರಾಮದ ಮಗಳು ಎಚ್.ಎನ್.ಸವಿತಾ ಒಲಿಂಪಿಕ್ಸ್ ಬಾಸ್ಕೆಟ್ ಬಾಲ್ ಪಂದ್ಯಾವಳಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ನಮ್ಮ ತಾಲೂಕು ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ ಎಂದು ಗ್ರಾಪಂ ಅಧ್ಯಕ್ಷ ಹಲಸೂರು ಟಿ. ಕುಮಾರ್ ತಿಳಿಸಿದರು.
ತಾಲೂಕಿನ ಕೊತ್ತೇಗಾಲ ಗ್ರಾ.ಪಂ. ವ್ಯಾಪ್ತಿಯ ಹಲಸೂರು ಗ್ರಾಮದ ಲಿಂಗಪ್ಪನಾಯಕ ಮಗಳಾದ ಎಚ್.ಎನ್. ಸವಿತಾ ಎಂಬುವರು ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಉದಯೋನ್ಮುಖ ಕ್ರೀಡಾಪಟು ಕರ್ನಾಟಕ ರಾಜ್ಯ ವಿಶೇಷ ಒಲಂಪಿಕ್ಸ್ ನ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಿ, ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿರುವ ಸುದ್ದಿ ಗಮನಕ್ಕೆ ಬಂದ ಕೂಡಲೇ ಗ್ರಾ.ಪಂ. ಆಡಳಿತ ಮತ್ತು ಮುಖಂಡರು ಸನ್ಮಾನಿಸಿ ಮಾತನಾಡಿದರು.
ಎಚ್.ಎನ್. ಸವಿತಾ ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿದ್ದು ಇವರು ಎಚ್.ಡಿ.ಕೋಟೆ ತಾಲೂಕು ಹಲಸೂರು ಗ್ರಾಮದ ನಿಂಗಪ್ಪನಾಯಕ ಮತ್ತು ರಾಧಾ ದಂಪತಿಯ ಪುತ್ರಿ. ನಮ್ಮ ತಾಲೂಕಿನ ಗ್ರಾಮೀಣ ಭಾಗದಲ್ಲಿ ಇಂತಹ ಪ್ರತಿಭೆಯನ್ನು ಗುರುತಿಸಿದ ಶಿಕ್ಷಣ ಸಂಸ್ಥೆಗೆ ಧನ್ಯವಾದಗಳು ಎಂದು ತಿಳಿಸಿದರು.
ಲಿಂಗಪ್ಪನಾಯಕರವರ ಮಗಳು ನಮ್ಮ ತಾಲೂಕು ಹಾಗೂ ಗ್ರಾಮಗೆ ಒಳ್ಳೆಯ ಹೆಸರು ತಂದಿದ್ದಾರೆ. ಕಡುಬಡತನದಲ್ಲಿ ಹುಟ್ಟಿ ಬೆಳೆದ ಇವರ ತಂದೆ ತಾಯಿ ಕೂಲಿ ಮಾಡಿ ಮಗಳನ್ನು ಒಳ್ಳೆಯ ವಿದ್ಯಾಭ್ಯಾಸ ಮಾಡಿಸಿ ನಂತರ ಉನ್ನತ ಮಟ್ಟದ ಶಿಕ್ಷಣಕ್ಕೆ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇವಳ ಪ್ರತಿಭೆ ನೋಡಿ ಶಿಕ್ಷಕರು ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದರು. ಅದನ್ನು ಬಳಸಿಕೊಂಡು ನಮ್ಮ ಗ್ರಾಮಕ್ಕೆ ಕೀರ್ತಿ ತಂದು ಕೊಟ್ಟಿದ್ದಾಳೆ ಎಂದು ಸಂತೋಷ ವ್ಯಕ್ತಪಡಿಸಿದರು.
ರಾಷ್ಟ್ರಮಟ್ಟದ ವಿಶೇಷ ಒಲಂಪಿಕ್ಸ್ ನ ಬಾಸ್ಕೆಟ್ ಬಾಲ್ ಪಂದ್ಯಾವಳಿಯು ಒರಿಸ್ಸಾದ ಕೂರ್ದ ಜಿಲ್ಲೆಯ ಕೆ.ಟಿ. ಪಬ್ಲಿಕ್ ಶಾಲೆಯಲ್ಲಿ ಅ.5 ರಿಂದ 9 ರವರೆಗೆ ಪಂದ್ಯಾವಳಿ ನಡೆಯಲಿದ್ದು, ಅತ್ಯುತ್ತಮ ಪ್ರದರ್ಶನ ತೋರಿದ ತಂಡ ಮತ್ತು ಆಟಗಾರ್ತಿಯರನ್ನು 2027ರಲ್ಲಿ ಚಿಲಿ ರಾಜ್ಯದ ದಕ್ಷಿಣ ಅಮೆರಿಕದಲ್ಲಿ ನಡೆಯುವ ಅಂತಾರಾಷ್ಟ್ರೀಯ ವಿಶೇಷ ಒಲಂಪಿಕ್ಸ್ ತಂಡಕ್ಕೆ ಭಾರತವನ್ನು ಪ್ರತಿನಿಧಿಸಲು ಆಯ್ಕೆ ಮಾಡಿಕೊಳ್ಳಲಾಗುವುದು ಹಾಗೂ ತರಬೇತಿ ಶಿಬಿರವು ಅ.2 ರಿಂದ 4 ರವರೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆಯ ಲಿದೆ ಎಂದು ವಿಶೇಷ ಒಲಂಪಿಕ್ಸ್ ಸಂಸ್ಥೆಯ ಮೂಲ ತಿಳಿಸಿದೆ.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಟಿ.ಕುಮಾರ್, ಉಪಾಧ್ಯಕ್ಷೆ ಶೋಭಾ ಸುಂದರ್, ಮಾಜಿ ಅಧ್ಯಕ್ಷ ಹಾಗೂ ಸದಸ್ಯರು ಚಲುವಪ್ಪ, ಮಹೇಶ್, ಮಹಾದೇವಯ್ಯ, ಗೌರಮ್ಮ, ನಿರ್ಮಲ ಬಸವರಾಜು, ಕೆಂಪಲಾಮ್ಮ, ಮುಖಂಡರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ, ಪುಟ್ಟೇಗೌಡ, ಸುಂದರ್, ಶಂಕರಪ್ಪ, ಸಿ.ರವಿ, ಗಣೇಶ್, ಚಾಮನಾಯಕ, ಪಿಡಿಒ ನಾಗೇಂದ್ರ, ನಾಗರಾಜು, ಶಂಭುನಾಯಕ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



