ಚಂಡೀಗಢ : ಕಳೆದ ವರ್ಷ ಗಣರಾಜ್ಯೋತ್ಸವ ದಿನದಂದು (Republic Day)ದೆಹಲಿಯ ಕೆಂಪು ಕೋಟೆ ಬಳಿ ನಡೆದ ಹಿಂಸಾಚಾರದ ಪ್ರಮುಖ ಆರೋಪಿ ಪಂಜಾಬಿ ನಟ ದೀಪ್ ಸಿಧು (Deep Sidhu) ಮಂಗಳವಾರ (ಫೆಬ್ರವರಿ 15) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದೀಗ ದೀಪ್ ಸಿಧು ಅವರ ಕಾರು ಅಪಘಾತಕ್ಕೆ ಕಾರಣನಾದ ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಹರಿಯಾಣದ ಟ್ರಕ್ ಚಾಲಕ :
ಬಂಧಿತ ಆರೋಪಿ ಟ್ರಕ್ ಚಾಲಕನನ್ನು ಹರಿಯಾಣದ ನಹು ನಿವಾಸಿ ಖಾಸಿಂ ಎಂದು ಗುರುತಿಸಲಾಗಿದೆ. ಬಂಧಿತನನ್ನು ಇಂದು (ಫೆಬ್ರವರಿ 18) ನ್ಯಾಯಾಲಯಕ್ಕೆ (Court) ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಟ್ರಕ್‌ಗೆ ಎಸ್‌ಯುವಿ ಡಿಕ್ಕಿ :
ಹರಿಯಾಣದ ಸೋನಿಪತ್ ಜಿಲ್ಲೆಯ ಖರ್ಖೋಡಾ ಬಳಿ ಕುಂಡ್ಲಿ-ಮನೇಸರ್-ಪಲ್ವಾಲ್ ಹೆದ್ದಾರಿಯಲ್ಲಿ ದೀಪ್ ಸಿಧು (Deep Sidhu) ಅವರ ಎಸ್‌ಯುವಿ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ದೀಪ್ ಸಿಧು ಸಾವನ್ನಪ್ಪಿದ್ದರು.
ಅಪಘಾತದ ವೇಳೆ ದೀಪ್ ಜೊತೆಗಿದ್ದ ಭಾವಿ ಪತ್ನಿ :
ಅಪಘಾತದ ವೇಳೆ ದೀಪ್ ಸಿಧು ಅವರ ಜೊತೆ ರೀನಾ ರೈ (Reena Rai) ಇದ್ದರು. ರೀನಾ ರೈ ಮತ್ತು ದೀಪ್ ಸಿಧು ನಿಶ್ಚಿತಾರ್ಥ ನೆರವೇರಿತ್ತು. ರೀನಾ ಕೂಡ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ದೀಪ್ ಸಿಧು (Deep Sidhu Accident)ಅವರೊಂದಿಗಿನ ಸಂಬಂಧದಿಂದಾಗಿ ರೀನಾ ರೈ ನಿರಂತರ ಸುದ್ದಿಯಲ್ಲಿದ್ದರು.
ರೈತರ ಚಳವಳಿಯೊಂದಿಗೆ ಚರ್ಚೆಯಾಗಿದ್ದ ದೀಪ್ ಸಿದ್ದು :
ಫೆಬ್ರವರಿ 9, 2021 ರಂದು ಮೂರು ಕೃಷಿ ಕಾನೂನುಗಳ (Agriculture law)ವಿರುದ್ಧ ಗಣರಾಜ್ಯೋತ್ಸವದಂದು ರೈತರು ದೆಹಲಿಯಲ್ಲಿ ಆಯೋಜಿಸಿದ್ದ ಟ್ರ್ಯಾಕ್ಟರ್ ಪರೇಡ್ (tractor parade) ವೇಳೆ ಕೆಂಪು ಕೋಟೆ (Red Fort) ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ದೀಪ್ ಸಿಧು ಅವರನ್ನು ಬಂಧಿಸಲಾಗಿತ್ತು. ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದ ಆರೋಪದ ನಂತರ ದೀಪ್ ಸಿಧು ಹಲವು ದಿನಗಳ ಕಾಲ ತಲೆಮರೆಸಿಕೊಂಡಿದ್ದರು.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy