ಸರಗೂರು: ಕೂಡಗಿ ಗ್ರಾಮದಲ್ಲಿ ಹುಲಿ ದಾಳಿಗೆ ರೈತ ದೊಡ್ಡ ನಿಂಗಯ್ಯರವರು ಬಲಿಯಾದ ಹಿನ್ನೆಲೆಯಲ್ಲಿ ಗ್ರಾಮದ ಕುಟುಂಬಗಳಿಗೆ ಅರಣ್ಯ ಇಲಾಖೆ ವತಿಯಿಂದ ಸೋಮವಾರ ಆಹಾರ ಕಿಟ್ ವಿತರಿಸಿದರು.
ತಾಲೂಕಿನ ಕೂಡಗಿ ಗ್ರಾಮದಲ್ಲಿ ಶುಕ್ರವಾರದಂದು ಹುಲಿ ದಾಳಿಗೆ ದೊಡ್ಡ ನಿಂಗಯ್ಯ ರವರು ಮೃತಪಟ್ಟ ಹಿನ್ನೆಲೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ ಸಾರ್ವಜನಿಕರ ಸಭೆ ನಡೆಸಿದ್ದು, ಹುಲಿ ದಾಳಿಗೆ ಹೆದರಿ ರೈತರು ಜಮೀನುಗಳಿಗೆ ಹೋಗಲು ಭಯಪಡುವದರಿಂದ ಅರಣ್ಯ ಇಲಾಖೆ ವತಿಯಿಂದ ಕೂಡಗಿ ಮತ್ತು ಕುರ್ಣೇಗಾಲ ಗ್ರಾಮದ ಕುಟುಂಬಗಳಿಗೆ ಆಹಾರ ಕಿಟ್ ನೀಡಬೇಕು ಎಂದು ಸೂಚನೆ ನೀಡಿದ್ದರು. ಈ ಸೂಚನೆ ಮೇರೆಗೆ ಮೇರೆಗೆ ಕಿಟ್ ವಿತರಿಸಲಾಯಿತು.
ಮೊಳೆಯೂರು ವಲಯ ಅರಣ್ಯಾಧಿಕಾರಿ ಅಮೃತಾ ಮಾಯಪ್ಪ ಈ ಸಂದರ್ಭದಲ್ಲಿ ಮಾತನಾಡಿ, ದೊಡ್ಡ ನಿಂಗಯ್ಯನವರ ಹಿನ್ನೆಲೆಯಲ್ಲಿ ಈ ಭಾಗದ ಜನರು ಕೂಲಿ ಹಾಗೂ ಜಮೀನಿನಲ್ಲಿ ಕೆಲಸ ಮಾಡಲು ಹೋಗುತ್ತಿಲ್ಲವಾದ್ದರಿಂದ ಮೂರು ದಿನಗಳಿಂದ ಆಹಾರದ ಕಿಟ್ ನೀಡುತ್ತಿದ್ದೇವೆ. 100 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಹಾಗೂ ಡ್ರೋನ್ ಕ್ಯಾಮರಾ ಮತ್ತು ಸಾಕಾನೆ ಒಳಗೊಂಡು ಹುಲಿ ಸೆರೆಗೆ ಕೂಂಬಿಂಗ್ ನಡೆಸುತ್ತಿದ್ದೇವೆ. ಜಮೀನು ಹಾಗೂ ಕಾಡಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಹುಲಿಯ ಸುಳಿವು ಸಿಕ್ಕಿಲ್ಲ. ನಮ್ಮ ಮೇಲಾಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಕಾರ್ಯರ್ಯಾಚರಣೆ ಮುಂದುವರಲಿದೆ ಎಂದರು.
ಬಿ ಮಟಕರೆ ಗ್ರಾಪಂ ಸದಸ್ಯ ಹಾಗೂ ಎಸ್ಸಿ ಎಸ್ಟಿ ಸಮಿತಿ ಸದಸ್ಯ ಕುರ್ಣೇಗಾಲ ಬೆಟ್ಟ ಸ್ವಾಮಿ ಮಾತನಾಡಿ, ಹುಲಿ ದಾಳಿಗೆ ಮೃತಪಟ್ಟ ಹಿನ್ನೆಲೆಯಲ್ಲಿ, ಈ ಭಾಗದ ರೈತರು ಯಾರು ಜಮೀನು ಹತ್ತಿರಕ್ಕೆ ಹೋಗುತ್ತಿಲ್ಲ. ಶಾಸಕರು ಹೇಳಿದ ದಿನದಿಂದ ಕೂಡಗಿ ಮತ್ತು ಕುರ್ಣೇಗಾಲ ಗ್ರಾಮದ ಕುಟುಂಬಗಳಿಗೆ ಆಹಾರ ಕಿಟ್ ನೀಡುತ್ತಿದ್ದಾರೆ. ಬೇಗ ಹುಲಿಯನ್ನು ಸೆರೆ ಹಿಡಿದು ರೈತರು ಜಮೀನುಗಳಲ್ಲಿ ಕೆಲಸ ಅವಕಾಶ ಮಾಡಿ. ಇಲ್ಲದರೆ ಹತ್ತಿ ರಾಗಿ ಬೆಳೆಗಳನ್ನು ರೈತರು ಬೆಳೆದಿದ್ದಾರೆ ಅದಕ್ಕೆ ಕಾಡಂಚಿನ ಭಾಗದಲ್ಲಿರುವ ಜಮೀನುಗಳು ಅರಣ್ಯ ಸಿಬ್ಬಂದಿ ನೇಮಕ ಮಾಡಿ ಬೆಳೆಯನ್ನು ರಕ್ಷಣೆ ಮಾಡಿ ತರುವ ನಿಟ್ಟಿನಲ್ಲಿ ಸಿಬ್ಬಂದಿಗಳನ್ನು ನೇಮಿಸಿ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಸಿದ್ದು, ಸುರೇಶ್, ಕೃಷ್ಣ, ಇನ್ನೂ ಮುಖಂಡರು ಸೇರಿದಂತೆ ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


