ಚೇಳೂರು: ಚೇಳೂರಿನ ಶ್ರೀ ಗುರುಸಂಗಮೇಶ್ವರಸ್ವಾಮಿ ಅವರ ಲಕ್ಷದೀಪೋತ್ಸವ ನವೆಂಬರ್ 10 ರಂದು ನಡೆಯಲಿದೆ.
ಅಂದು ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ, ರುದ್ರಾಭಿಷೇಕ ನಡೆದು ಸಂಜೆ ಲಕ್ಷದೀಪೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಗವಿಮಠದ ಚಂದ್ರಶೇಖರಸ್ವಾಮೀಜಿ, ಬೆಳ್ಳಾವಿಯ ಕಾರದಮಠದ ಕಾರದವೀರಬಸವ ಸ್ವಾಮೀಜಿ ತೆವೆಡೆಹಳ್ಳಿ ಗದ್ದಿಗೆಮಠದ ಗೋಸಲಚನ್ನಬಸವೇಶ್ವರ ಸ್ವಾಮೀಜಿ, ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಈಶ್ವರಪ್ಪ ಕೇಂದ್ರ ಸಚಿವ ವಿ. ಸೋಮಣ್ಣ,ಶಾಸಕ ಎಸ್.ಆರ್. ಶ್ರೀನಿವಾಸ್,
ಹಾಲು ಒಕ್ಕೂಟದ ನಿರ್ದೇಶಕಿ ಭಾರತಿಶ್ರೀನಿವಾಸ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ, ಮುಖಂಡರಾದ ಪಟೇಲ್ ಟೇಶ್, ದಿಲೀಪ್ ಕುಮಾರ್, ನಾಗರಾಜು ಹಾಗೂ ಇತರರು ಭಾಗವಹಿ ಸುವರು ದೀಪೋತ್ಸವಕ್ಕೆ ಬಂದಂತಹ ಭಕ್ತಾದಿಗಳಿಗೆ ಸೇವಾ ಸಮಿತಿಯೊಂದಿಗೆ ನಂಜುಂಡಪ್ಪ, ಸುನಂದಮ್ಮ ಇವರಿಂದ ದಾಸೋಹವನ್ನು ಏರ್ಪಡಿಸಲಾಗಿದೆ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


