ಸರಗೂರು: ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ ನ.16 ರಿಂದ 18 ವರೆಗೆ ನಡೆಯಲಿದ್ದು, ಜಾತ್ರಾ ಲಾಡು ಪ್ರಸಾದ ಟೆಂಡರ್ ತಹಶೀಲ್ದಾರ್ ಅಧ್ಯಕ್ಷತೆ ನಡೆದ ಪ್ರಕ್ರಿಯೆ ಗುರುವಾರದಂದು ನಡೆಯಿತು.
ನಂತರ ತಹಶೀಲ್ದಾರ್ ಮೋಹನಕುಮಾರಿ ಮಾತನಾಡಿ, ಲಾಡು ಪ್ರಸಾದ ಟೆಂಡರ್ ಪ್ರಕ್ರಿಯೆಯಲ್ಲಿ 6 ಟೆಂಡರದಾರು ಭಾಗವಹಿಸುವರು. ಸರ್ಕಾರ ಸುತ್ತೋಲೆ ಪ್ರಕಾರ ಲಾಡು ಪ್ರಸಾದ ಮಾರಾಟ ಮಾಡಬೇಕು. ಭಕ್ತಾದಿಗಳಿಗೆ ಲಾಡು ವಿತರಣೆ ಮಾಡುವ ಸಮಯದಲ್ಲಿ ನಿಗದಿಪಡಿಸಿದ ಹಣವನ್ನು ತೆಗೆದುಕೊಳ್ಳಬೇಕು. ಅದರ ಮೇಲಟ್ಟ ಹಣವನ್ನು ತೆಗೆದುಕೊಂಡರೆ, ನಮ್ಮ ಗಮನಕ್ಕೆ ಬಂದರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಅವರ ಟೆಂಡರನ್ನು ವಜಾಗೊಳಸಲಾಗುತ್ತದೆ ಎಂದು ತಿಳಿಸಿದರು.
6 ಟೆಂಡರ್ ದಾರಲ್ಲಿ ಒಬ್ಬರಿಗೆ ಟೆಂಡರ್ ಆಗುತ್ತದೆ ಅದರಲ್ಲಿ ಲಾಡುಗೆ ಯಾವ ಯಾವ ಸಾಮಗ್ರಿಗಳು ಬಳಸಿಕೊಂಡು ಕ್ವಾಲಿಟಿಯಲ್ಲಿ ಮಾರಾಟ ಮಾಡಬೇಕು ಅದರಲ್ಲಿ ಲೋಪದೋಷಗಳನ್ನು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಲಾಡು ಪ್ರಸಾದ ಟೆಂಡರ್ ಪ್ರಕ್ರಿಯೆಯಲ್ಲಿ ಚನ್ನಗುಂಡಿ ಗ್ರಾಮದ ನಾಗರಾಜು ಎಂಬುವರಿಗೆ 1 ಲಕ್ಷ 72 ಸಾವಿರ ಟೆಂಡರ್ ಕೂಗಿಕೊಂಡರು. ಜಾತ್ರೆ ಕಾಡಿನಲ್ಲಿ ನಡೆಯುವುದರಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಅದರಿಂದ ಯಾರು ಪ್ಲಾಸ್ಟಿಕ್ ಬಳಕೆ ಮಾಡಿರಬಹುದು ಎಚ್ಚರಿಕೆ ನೀಡಿದರು.
ಈ ಲಾಡು ಪ್ರಸಾದ ಟೆಂಡರ್ ಈ ವರ್ಷದಿಂದ ಮುಂಬರುವ ಜಾತ್ರಾ ಸಮಯದವರೆಗೆ ಅಮಾವಾಸ್ಯೆ ಸಮಯದಲ್ಲಿ ಮಾರಾಟ ಮಾಡಲು ಅವಕಾಶ ಇರುತ್ತದೆ. ದತ್ತಿ ಇಲಾಖೆ ಅಧಿಕಾರಿಗಳು ಲಾಡು ಪ್ರಸಾದ ಮಾರಾಟ ಮಾಡುವ ವ್ಯಕ್ತಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಗಮನಕ್ಕೆ ತಂದು ದೇವಸ್ಥಾನದ ಒಳಗಡೆ ಹೋಗಲು ಪಾಸ್ ವ್ಯವಸ್ಥೆ ಮಾಡಿ ಮುಂಭಾಗದಲ್ಲಿ ವಿತರಣೆ ಮಾಡಲು ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದತ್ತಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಮುಜೀಬ್, ಶುಭಾ, ಪಾರುಪತ್ತೇದಾರು ರಾಕೇಶ್ ಗೌಡ, ಚಿಕ್ಕ ದೇವಮ್ಮ ಬೆಟ್ಟದ ಪಾರುಪತ್ತೇದಾರ ಶಾಂತಿಪುರ ಮಹದೇವಸ್ವಾಮಿ, ಟೆಂಡರ್ ದಾರರು ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


