ಸರಗೂರು: ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಿ ಜನರನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡಿ ಬ್ರಾಹ್ಮಣ್ಯವಾದಿ ಆರ್ ಎಸ್ ಎಸ್ ಅಧಿಕಾರವನ್ನು ಅನುಭವಿಸುತ್ತಿದೆ ಎಂದು ಆರೋಪಿಸಿ ತಾಲೂಕಿನ ತಹಶೀಲ್ದಾರ್ ಕಚೇರಿ ಬಳಿ ದಸಂಸ (ಅಂಬೇಡ್ಕರ್ ವಾದ) ಸಂಘಟನೆ ಶಾಂತಿಯುತ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ದಸಂಸ (ಅಂಬೇಡ್ಕರ್ ವಾದ) ಸಂಘಟನೆ ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು, ಡಾ.ಬಾಬಾ ಸಾಹೇಬ ಅಂಬೇಡ್ಕರರವರು ಯಾವುದೆ ಕಾರಣಕ್ಕೂ ಆರ್ ಎಸ್ ಎಸ್ ಹಾಗೂ ವಿಶ್ವ ಹಿಂದೂ ಮಹಾಸಭಾದಂತಹ ಸಂಘಟನೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದೆಂದು. ರಾಜಕೀಯ ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರಣಾಳಿಕೆಯಲ್ಲಿ ಎಚ್ಚರಿಕೆ ನೀಡಿದ್ದರು. ಆರ್ ಎಸ್‌ಎಸ್ ಅಪಾಯಕಾರಿ ಸಂಘಟನೆ ಎಂದೂ ಘೋಷಿಸಿದ್ದರು. ಆ ಮೂಲಕ ಮನುವಾದಿಗಳು ಮನುಸ್ಮೃತಿಯನ್ನು ಪೂಜಿಸಿ ಭಾರತದ ಸಂವಿಧಾನವನ್ನು ಅಂದಿನಿಂದಲು ತಿರಸ್ಕಾರದ ಮನೊಭಾವದಿಂದಲೇ ನೋಡುತ್ತಾ ಬಂದಿರುತ್ತಾರೆ. ಸಂವಿಧಾನದ ಮೇಲೆ ಯುದ್ಧ ಸಾರಿರುವ ಆರ್ ಎಸ್ ಎಸ್ ಮತ್ತು ಬಿಜೆಪಿಯವರ ಆಟ ಅತಿರೇಖಾವಾಗಿದೆ ಎಂದರು.
ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ಲಂಕೆ ದೇವರಾಜು ಮಾತನಾಡಿ, ಮುಂಗಡವಾಗಿ ಅನುಮತಿ ಇಲ್ಲದೆ ತನಗೆ ಬೇಕಾದ ಸ್ಥಳಗಳಲ್ಲಿ ಪಥ ಸಂಚಲನ ಮಾಡಿ ತೊಂದರೆ ಕೊಡುವುದನ್ನು ಸಚಿವರಾದ ಪ್ರಿಯಾಂಕ ಖರ್ಗೆ ರವರು, ಅನುಮತಿ ಇಲ್ಲದೆ ಸರಕಾರಿ ಇತರೆ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅವಕಾಶ ಕೊಡಬಾರದೆಂದು ಸರಕಾರಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಒಬ್ಬ ಮನುವಾದಿ ಆರ್ ಎಸ್ ಎಸ್ ಕಾರ್ಯಾಕರ್ತ ಪ್ರಿಯಾಂಕ ಖರ್ಗೆ ರವರನ್ನು ವಾಟ್ಸಾಪ್ ನಲ್ಲಿ ಅಶ್ಲೀಲ ಶಬ್ದ ಬಳಸಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಇಂತಹ ಕೀಳು ಮಟ್ಟದ ಮನಸ್ಥಿತಿ ಹೊಂದಿರುವ ಆರ್ ಎಸ್ ಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದರು.
ಸರಗೂರು ತಾಲ್ಲೂಕಿನ ಬಿ ಮಟಕರೆ ಗ್ರಾಪಂ ವ್ಯಾಪ್ತಿಯ ಬೇಗೂರು ಸರ್ವೇ ನಂಬರ್ 6 ರಲ್ಲಿ ದರಕಾಸ್ತು ಮುಖಾಂತರ ಸಾಗುವಳಿ ಮಂಜೂರಾಗಿದ್ದು, ಸುಮಾ, ಲತಾ , ಎಂಬುವ ದಲಿತ ಹೆಣ್ಣುಮಕ್ಕಳು ಅನುಭವ ಇದ್ದು ಇದನ್ನು ಕಾಡಬೇಗೂರು ಗ್ರಾಮದ ದಾಸಪ್ಪ ಬೀನ್ ಗೋವಿಂದಪ್ಪ ಎಂಬುವವರು ತುಂಬಾ ಕಿರುಕುಳ ನೀಡುತಿದ್ದು ಇವರ ಮೇಲೆ ಎಸ್ಸಿ ಎಸ್ಟಿ ಪ್ರಕರಣ ದಾಖಲಾಗಬೇಕೆಂದು ಒತ್ತಾಯಿಸುತ್ತೇವೆ ಎಂದರು.
ಹಕ್ಕೊತ್ತಾಯಗಳು:
ದೇಶದಲ್ಲಿ ಕೋಮುದ್ವೇಷ ತುಂಬಿ, ಜಾತಿ ಜಾತಿಗಳ ನಡುವೆ ಕೋಮು ಗಲಭೆ ಎಬ್ಬಿಸುವ ನೋಂದಣಿ ಇಲ್ಲದ ಆರ್ ಎಸ್ ಎಸ್ ಸಂಘಟನೆಯನ್ನು ಸರಕಾರ ರದ್ದುಗೊಳಿಸಬೇಕು.
ಸಚಿವರಾದ ಪ್ರಿಯಾಂಕ ಖರ್ಗೆಯವರಿಗೆ ಕರೆಮಾಡಿ ಅಶ್ಲೀಲ ಪದ ಬಳಸಿ, ಜೀವ ಬೆದರಿಕೆ ಹಾಕಿದವರನ್ನು ಕಾನೂನು ಪ್ರಕಾರ ಜೀವ ಶಿಕ್ಷೆಗೆ ಗುರಿ ಪಡೆಸಬೇಕು.
ಉದ್ದೇಶ ಪೂರ್ವಕವಾಗಿ ಚಿತ್ತಾಪುರನ್ನು ಗುರಿಯಾಗಿ ಇಟ್ಟುಕೊಂಡು ಪಥಸಂಚಲನ ಮಾಡಲು ಹೊರಟ ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಸರಕಾರ ಅನುಮತಿ ನೀಡಬಾರದು.
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರಾದ ಬಿ.ಆರ್.ಗವಾಯಿಯವರ ಮೇಲೆ ಶೂ ಎಸೆದ ವಕೀಲನನ್ನು ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು.
ಆರ್ ಎಸ್ ಎಸ್ ಬ್ಯಾನ್ ಮಾಡಿಲ್ಲ ಎಂದ ಕಾಲದಲ್ಲಿ ರಾಜ್ಯಾದ್ಯಂತ ಪ್ರಗತಿಪರ ಸಂಘಟನೆಗಳು ಜೊತೆಗೂಡಿ ಬೃಹತ್ ಸಮಾವೇಶ ಮಾಡಲಾಗುವುದು ಎಂದು ದಸಂಸ (ಅಂಬೇಡ್ಕರ್ ವಾದ) ಸಂಘಟನೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಕಾರರು ಹಾದನೂರು ಚಂದ್ರ, ಕೃಷ್ಣಕುರ್ಣೇಗಾಲ, ಶಿವರಾಜು ಚೌಂಗಗೌಡನಹಳ್ಳಿ, ಕೂಲ್ಯ ಮಹದೇವಸ್ವಾಮಿ, ಮಹದೇವ, ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಮಹೇಶ್, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ಲಂಕೆ ದೇವರಾಜು, ಪರಶಿವ, ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


