ಪಾವಗಡ: ಪಟ್ಟಣದ ಕಾಳಿದಾಸ ನಗರದಲ್ಲಿ ಸೋಮವಾರ ರಾತ್ರಿ ಮನೆಯ ಬೀಗ ಒಡೆದು, ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಓಬಳಮ್ಮ ಅವರ ಮನೆ ಬೀಗ ಒಡೆದ ಕಳ್ಳರು 2 ಲಕ್ಷ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಮನೆಗೆ ಬೀಗ ಹಾಕಿ ಮಹಡಿ ಮೇಲೆ ಮಲಗಿದ್ದರು. ಮನೆಯ ಕಾರ್ಯಕ್ರಮಕ್ಕಾಗಿ ನಗದನ್ನು ಮನೆಯಲ್ಲಿರಿಸಲಾಗಿತ್ತು. ಮನೆಯ ಗೇಟ್ ಹಾರಿ, ಬೀಗ ಒಡೆದು ಕೃತ್ಯ ಎಸಗಲಾಗಿದೆ. ಬೆಳಿಗ್ಗೆ ನಗದು, ಚಿನ್ನದ ಆಭರಣ ಕಳವಾಗಿರುವುದು ತಿಳಿಯಿತು ಎಂದು ಓಬಳಮ್ಮ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


