ಕೊರಟಗೆರೆ : ಇತ್ತೀಚಿಗೆ ನಡೆದ ತುಮಕೂರು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಕೊರಟಗೆರೆಯ ಮೂವರು ಪತ್ರಕರ್ತರು ಜಿಲ್ಲಾ ಸಂಘಕ್ಕೆ ಆಯ್ಕೆಯಾಗಿದ್ದು, ಕೊರಟಗೆರೆ ತಾಲೂಕು ಸಂಘ ಅಭಿನಂದನೆ ಸಲ್ಲಿಸಿದ್ದಾರೆ.
ನ. 9ರಂದು ತುಮಕೂರು ಪತ್ರಕರ್ತರ ಭವನದಲ್ಲಿ ನಡೆದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆಯ ಚುನಾವಣೆಯಲ್ಲಿ ಕೊರಟಗೆರೆ ತಾಲೂಕು ಸಂಘದ ಹಾಲಿ ಅಧ್ಯಕ್ಷ ಕೆ.ವಿ. ಪುರುಷೋತ್ತಮ್, ರಂಗಧಾಮಯ್ಯ, ಯಶಸ್.ಕೆ.ಪದ್ಮನಾಭ್, ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು.
ರಂಗಧಾಮಯ್ಯ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ 204 ಮತಗಳನ್ನ ಪಡೆದು ಜಯಶೀಲರಾಗಿದ್ದು, ಇನ್ನೂರ್ವ ಸ್ಪರ್ಧಿ ಯಶಸ್.ಕೆ. ಪದ್ಮನಾಬ್ ಅವರು 159 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಇನ್ನೂ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ವಿ.ಪುರುಷೋತ್ತಮ್ ಅವರು 190 ಮತಗಳನ್ನ ಪಡೆದು ಜಯಶೀಲರಾಗಿ ಕೊರಟಗೆರೆ ತಾಲ್ಲೂಕು ಸಂಘಕ್ಕೆ ಹೆಸರು ತಂದಿದ್ದು, ಕೊರಟಗೆರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಮೂವರಿಗೆ ಅಭಿನಂದನೆಗಳನ್ನ ತಿಳಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


