ಸರಗೂರು: ತಾಲೂಕಿನ ಹೆಗ್ಗನೂರು ಗ್ರಾಮದ ಜಮೀನಿನಲ್ಲಿ ಗುರುವಾರದಂದು ಅರಣ್ಯ ಇಲಾಖೆ ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದು, ಡ್ರೋನ್ ಕಾಮರಾದಲ್ಲಿ ಹುಲಿ ಹೆಜ್ಜೆ ಗುರುತು ಹಾಗೂ ಹುಲಿ ಕಾಣಿಸಿಕೊಂಡಿಲ್ಲ.
ಸರಗೂರು ವಲಯದ ಪ್ರದೇಶ ವ್ಯಾಪ್ತಿಯ ಹೆಗ್ಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗನೂರು ಗ್ರಾಮದ ಜಮೀನಿನಲ್ಲಿ ಅರಣ್ಯ ಇಲಾಖೆ ಸಾಕಾನೆಗಳಾದ ಪ್ರಶಾಂತ್, ಲಕ್ಷಣ, ಆನೆಗಳ ಸಹಾಯದಿಂದ ಕಾರ್ಯಾಚರಣೆ ಮುಂದುವರಿದಿದೆ. ಡ್ರೋನ್ ಕ್ಯಾಮರಾದಲ್ಲಿ ಗುರುತು ಮತ್ತು ಹುಲಿ ಸೆರೆಯಾಗಿಲ್ಲ. ಕಾರ್ಯಾಚರಣೆ ಮುಂದುವರಿದಿದೆ ಎಂದು ಸರಗೂರು ವಲಯದ ಆರ್ ಎಫ್ ಓ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.
ನಂತರ ಮಾತನಾಡಿದ ಗ್ರಾಮಸ್ಥರ ಮಾಹಿತಿ ಪ್ರಕಾರ, ಜಮೀನಿನಲ್ಲಿ ಹುಲಿ ಮೇಕೆ ಮರಿ ಮತ್ತು ದನದ ಕರುಗಳನ್ನು ಹೊತ್ತೊಯ್ದು ತಿಂದಿರುವ ಜಾಗದಲ್ಲಿ ಕೂಂಬಿಂಗ್ ಮಾಡಿದ್ದೇವೆ ಪತ್ತೆಯಾಗಿಲ್ಲ. ಹುಲಿ ದಾಳಿ ಮಾಡಿದೆ ಎಂದು ಗ್ರಾಮಸ್ಥರು ಗಮನಕ್ಕೆ ಬಂದ ಕೂಡಲೇ ನಮ್ಮ ಸಿಬ್ಬಂದಿಗಳು ಸ್ಥಳಕ್ಕೆ ಕಳಿಸಿ ಪರಿಶೀಲನೆ ನಡೆಸಿದ್ದಾರೆ. ನಂತರ ಒಂದೆರಡು ದಿನ ಕಾಲ ಜಿಪ್ ನಲ್ಲಿ ಬಿಟ್ ಹಾಕಿದ್ದೆವು. ಹುಲಿಯ ಚಲವನ ನೋಡಿ ಎರಡು ದಿನ ಸಾಕಾನೆ ಬಳಸಿಕೊಂಡು ಕೂಂಬಿಂಗ್ ಕಾರ್ಯಾಚರಣೆ ಹೆಚ್ಚಿನ ರೀತಿಯಲ್ಲಿ ನಡೆಸಿದ್ದೇವೆ ಆದರೆ ಯಾವುದೋ ಸೆರೆಯಾಗಿಲ್ಲ ಎಂದರು.
ಕಳೆದ ವಾರದಿಂದ ಹೆಗ್ಗನೂರು, ಹಂಚೀಪುರ, ತೆಲಗುಮನಹಳ್ಳಿ ಇನ್ನೂ ಮುಂತಾದ ಗ್ರಾಮಗಳು ಅರಣ್ಯಕ್ಕೆ ಹೊಂದಿಕೊಂಡಂತೆಯೇ ನೂರಾರು ಎಕರೆ ಕೃಷಿ ಭೂಮಿ ಇದೆ.ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬಾಳೆ ಇನ್ನೂ ಮುಂತಾದ ಬೆಳೆಗಳನ್ನು ಬೆಳೆಯುವುದರಿಂದ ಈ ಭಾಗದಲ್ಲಿ ರೈತರ ಸಂಚಾರ ಅಧಿಕವಾಗಿದೆ. ಅರಣ್ಯದಿಂದ ಕೃಷಿ ಭೂಮಿಯುತ ಆನೆ ಬಾರದಂತೆ ಕಂದಕ ನಿರ್ಮಾಣ ಮಾಡುವುದರಿಂದ ಆನೆ ಹಾವಳಿ ಕಡಿಮೆಯಾಗಿದೆ. ಹಂದಿ ಜಿಂಕೆಗಳು ಕೃಷಿಭೂಮಿಯುತ್ತ ಬರುವುದು ಸಹಜವಾದರೂ ರೈತರು ಅದು ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ ಇದೀಗ ಈ ಭಾಗದ ವ್ಯಾಪ್ತಿಯ ಜಮೀನುಗಳ ಸುತ್ತ ಮುತ್ತಲು ಹುಲಿ ಕಾಣಿಸಿಕೊಂಡಿರುವುದು ಅದರ ಜೊತೆಯಲ್ಲಿ ಜಾನುವಾರುಗಳ ಮೇಲೆ ದಾಳಿ ಮಾಡಿದ್ದು ರೈತರು ಹಾಗೂ ಸ್ಥಳೀಯರು ಆತಂಕ ಕಾರಣವಾಗಿದೆ ಎಂದು ಗ್ರಾಪಂ ಸದಸ್ಯ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸುಧೀರ್ ತಿಳಿಸಿದರು.
ಹುಲಿ ಸೆರೆಗೆ ಬೋನ್ ಕೂಡ ಇರಿಸಲಾಗಿದ್ದು, 130ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗಿದೆ. ಅರಣ್ಯ ಇಲಾಖೆ ಮೇಲಾಧಿಕಾರಿಗಳು, ಅರವಳಿಕೆ ತಜ್ಞರು ,ಇಲಾಖಾ ಡಿ ಆರ್ಎಫ್ಓ ಅನಂತ, ಬೈರಪ್ಪ, ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


