ಬೀದರ್: ಔರಾದ ತಾಲೂಕಿನ ತೇಗಂಪೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಶಾಲೆಯ ಶಿಕ್ಷಕರು ಹಾಗೂ ಪೋಷಕರು ಕೂಡಿ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಹಾಗೂ ಶಿಕ್ಷಕರು ಮಕ್ಕಳಿಗೆ ಕಾಣಿಕೆ ಮತ್ತು ಮಧ್ಯಾಹ್ನ ವಿಶೇಷ ಭೋಜನವನ್ನು ಮಾಡಿಸಿ ಮಕ್ಕಳ ದಿನಾಚರಣೆ ಆಚರಿಸಿದರು.
ಸಮಾಜ ಸೇವಕ ಯುವ ಉದ್ಯಮಿ ಗೌರವ ದೇಶಮುಖರವರು ಎಲ್ಲಾ ಮಕ್ಕಳಿಗೆ 150 ನೋಟ್ ಬುಕ್ ಹಾಗೂ ಪೆನ್ ವಿತರಣೆ ಮಾಡಿದರು. ನಂತರ ಮಾತನಾಡಿ, ಪಂಡಿತ ಜವಾಹರಲಾಲ್ ನೆಹರು ಅವರಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ ಮತ್ತು ಕಾಳಜಿ ಹೊಂದಿದ್ದರು. ಹೀಗಾಗಿ ತಮ್ಮ ಜನ್ಮದಿನವನ್ನು ಮಕ್ಕಳ ಜಯಂತಿಯನ್ನಾಗಿ ಆಚರಿಸಿರಿ ಎಂದು ಹೇಳಿದ್ದಕ್ಕಾಗಿ ಪ್ರತಿ ವರ್ಷ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಾಲೆಯ ಮುಖ್ಯೋಪಾಧ್ಯಾಯರಾದ ಸುಂದರಮ್ಮಾ ಸುವರ್ಣ ಕೋಟೆ, ಎಸ್ ಡಿ.ಎಮ್ ಸಿ ಅಧ್ಯಕ್ಷರಾದ ಅವಿನಾಶ ಮುಕ್ತೆದಾರ, ಉಪಾಧ್ಯಕ್ಷರಾದ ಚಂದು ಚಿಟಮೆ, ಗ್ರಾಮದ ಹಿರಿಯರಾದ ಕಾಶಪ್ಪಾ ಮುಕ್ತೆದಾರ, ಸೋಮನಾಥ ಮುಕ್ತೆದಾರ, ರೆವಣಪ್ಪಾ ಮುಕ್ತೆದಾರ, ರೇವಣಪ್ಪಾ ಮಜಗೆ, ನಾಗನಾಥ ಚಿಟಮೆ, ರಘುನಾಥ ಮುಕ್ತೆದಾರ, ಸಂಗಪ್ಪಾ ಮುಕ್ತೆದಾರ, ಚನ್ನಪ್ಪಾ ಮಜಗೆ, ಮಹೇಶ ಪಾಟೀಲ, ಹೀಗೆ ಗ್ರಾಮದ ಅನೇಕರು ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


