ಬೀದರ್: ಪ್ರತಿ ಟನ್ ಕಬ್ಬಿಗೆ 3,200 ರೂ. ಬೆಲೆ ನಿಗದಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ರೈತರೊಬ್ಬರು ಉರುಳು ಸೇವೆ ಮೂಲಕ ಉರುಳು ಸೇವೆ ಮೂಲಕ ಗಮನಸೆಳೆದಿದ್ದಾರೆ.
ಶನಿವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ರೈತರು ಭಾಗವಹಿಸಿ ಸರಕಾರದ ವಿರುದ್ಧ ಘೋಷಣೆಗಳು ಕೂಗಿದರು. ನಂತರದಲ್ಲಿ ಹುಡಗಿ ಗ್ರಾಮದ ರೈತ ಕರಬಸಪ್ಪ ಮಲಶೆಟ್ಟಿ ಅವರು ಅಂಬೇಡ್ಕರ್ ವೃತ್ತದಿಂದ ಉಸ್ತುವಾರಿ ಸಚಿವರ ಕಾರ್ಯಾಲಯದವರೆಗೆ ರಸ್ತೆ ಮೇಲೆಯೇ ಉರುಳು ಸೇವೆ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ, ಮೌಲಾ ಮುಲ್ಲಾ, ಆದಿನಾಥ್, ಖಾಸೀಮ್ ಅಲಿ, ಶಂಕರೆಪ್ಪಾ ಮರ್ಕಲ್, ಕೊಂಡಿಬಾ ಪಾಂಡ್ರೆ, ಶಿವರಾಜ್ ಪಾಟೀಲ್, ಬಾಬುರಾವ್ ಹೊನ್ನಾ, ಶಿವರಾಯ್ ಮುದಾಳೆ, ಖಾಶೆಪ್ಪಾ, ಧುಳಪ್ಪಾ, ರುದ್ರಸ್ವಾಮಿ, ಸಂತೋಷ ಗುದಗೆ, ಮಲ್ಲಿಕಾರ್ಜುನ ಸಂಗಮ್, ನಝೀರ್ ಅಹ್ಮದ್, ಪ್ರಕಾಶ್, ಶಾಂತಮ್ಮ, ಶಿವಲೀಲಾ, ವಿಜಯಕುಮಾರ್, ವೀರಾರೆಡ್ಡಿ, ನಾಗಶೆಟ್ಟಿ, ಭೀಮರಾವ್, ಖಮರ್ ಪಟೇಲ್, ವಿಜಯ್ ರೆಡ್ಡಿ, ನಾಗಶೆಟ್ಟಿ, ಮುಖೀಮುದ್ದೀನ್, ಖಾನಸಾಬ್, ಸಂಜು ಪಾಟೀಲ್, ಬಾಬುರಾವ ಪಾಟೀಲ್, ಸುರೇಶ್ ಪಾಟೀಲ್, ಬಸವರಾಜ್, ಸೋಮನಾಥ್ ಇತರರು ಉಪಸ್ಥಿತರಿದ್ದರು
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


