ಸರಗೂರು: ಕಣ್ಣಿನ ಆರೋಗ್ಯಕ್ಕೆ ಪೋಷಕಾಂಶವುಳ್ಳ ಸಮತೋಲನ ಆಹಾರ ಸೇವಿಸಬೇಕು ಎಂದು ರೋಟರಿ ಅವೈಡಬಲ್ ಬ್ಲೈಂಡ್ ನೆಸ್ ಫೌಂಡೇಷನ್ ನ ಕಾರ್ಯಕಾರಿ ಸಮಿತಿಯ ಸದಸ್ಯ ಸಂಪತ್ ಕುಮಾರ್ ತಿಳಿಸಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಅಂಗಸಂಸ್ಥೆಯಾದ ವಿವೇಕಾನಂದ ಸ್ಮಾರಕ ಆಸ್ಪತ್ರೆಯು ಕಣ್ಣಿನ ಶಸ್ತ್ರ ಚಿಕಿತ್ಸಾ ಸಮುದಾಯ ಸಮರ್ಪಣಾ ಕಾರ್ಯಕ್ರಮವನ್ನು ಮಂಗಳವಾರದಂದು ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಣ್ಣಿನ ಆರೋಗ್ಯ ಕಾಪಾಡಲು ಮತ್ತು ದೃಷ್ಟಿ ಸಮಸ್ಯೆ ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ, ಅಮೂಲ್ಯವಾದ ಕಣ್ಣುಗಳ ರಕ್ಷಣೆ ಬಗ್ಗೆಯೂ ಸದಾ ಎಚ್ಚರ ವಹಿಸುವುದು ಅತ್ಯಗತ್ಯ ಎಂದರು.
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಹಾಗೂ ಆಸ್ಪತ್ರೆ ಉಪ ನಿರ್ದೇಶಕರಾದ ಡಾ.ಶಂಕರ್ ಹೆಚ್.ಕೆ. ಮಾತನಾಡಿ, ಕಣ್ಣಿನ ತಪಾಸಣೆ ನಡೆಸಿ, ಅಗತ್ಯವಿದ್ದಲ್ಲಿ ಚಿಕಿತ್ಸೆ ಅಥವಾ ಸಲಹೆ ನೀಡುತ್ತಾರೆ. ಇವುಗಳು ಕಣ್ಣಿನ ತೊಂದರೆಗಳನ್ನು ಸಕಾಲದಲ್ಲಿ ಗುರುತಿಸಲು ಮತ್ತು ಚಿಕಿತ್ಸೆ ನೀಡಲು ಸಹಾಯಕವಾಗಿವೆ ಎಂದರು.
ಈ ಕಾರ್ಯಕ್ರಮವು ಆದಿವಾಸಿಗಳ ಅಂಧತ್ವ ನಿವಾರಣೆಗಾಗಿ ಆಯೋಜಿಸಿದ ಕಾರ್ಯಕ್ರಮವಾಗಿದ್ದು ಕಣ್ಣಿನ ಶಸ್ತçಚಿಕಿತ್ಸಾ ಶಿಬಿರಕ್ಕೆ ಅಂಕನಾಥಪುರ ಹಾಡಿ, ಹುಸ್ಕೂರ್ ಹಾಡಿ, ಪೆಂಜಳ್ಳಿಹಾಡಿ, ಲಕ್ಷೀಪುರಹಾಡಿ, ಹುಣಸೇಕುಪ್ಪೆಹಾಡಿ, ಕಾಟವಾಳಹಾಡಿ, ಬಾವಿಕೆರೆಹಾಡಿ, ದೇವನಹಾಡಿ, ಬ್ರಹ್ಮಗಿರಿಹಾಡಿಯಿಂದ ಒಟ್ಟು 29 ಜನ ಫಲಾನುಭವಿಗಳು ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ 23 ಮಂದಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಆದಿವಾಸಿ ಸಮುದಾಯದ ಪ್ರತಿನಿಧಿಗಳಾದ ಗೌರಿ, ಕಾರ್ಯಕ್ರಮದಲ್ಲಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ವ್ಯವಸ್ಥಾಪಕರಾದ ಸಂಧ್ಯ ಬಿ.ಜಿ., ವೈದ್ಯರಾದ ಡಾ.ಅಭಿಷೇಕ್, ಡಾ.ರೆನೋ, ಡಾ.ಧೀರಜ್, ನಂದೀಶ್, ಮಮತ, ಕವಿತ, ಶ್ಯಾಮಲ, ಸಿದ್ದರಾಜು ಬಿ.ಕೆ., ಪ್ರವೀಣ್, ವೆಂಕಟಸ್ವಾಮಿ, ಚನ್ನಪ್ಪ, ಈರಾಜು, ಹರ್ಷಿತ, ಬಂಗಾರಶೆಟ್ಟಿ, ಸಾರ್ವಜನಿಕರು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


