ಸರಗೂರು: ಪ್ರಾದೇಶಿಕ ಪಕ್ಷವನ್ನು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಘಟನೆ ಮಾಡಬೇಕು. ಪಕ್ಷದ ಚಿನ್ಹೆಯಲ್ಲಿ ಶಾಸಕರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲಾರೂ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷದ ಮುಖಂಡ ಕೆ.ಎಂ.ಕೃಷ್ಣನಾಯಕ ತಿಳಿಸಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಕರ್ನಾಟಕ ಪ್ರದೇಶ ಜನತಾದಳ ಜಾತ್ಯತೀತ 25 ವರ್ಷಗಳ ರಜತ ಮಹೋತ್ಸವ ಸಂಭ್ರಮ ಅಂಗವಾಗಿ ಗುರುವಾರ ಹಣ್ಣು ಹಂಪಲು ವಿತರಿಸಿ ಅವರು ಮಾತನಾಡಿದರು.
ಜನತಾದಳ ಜಾತ್ಯತೀತ ಪಕ್ಷ ಕರ್ನಾಟಕದಲ್ಲಿ ಹುಟ್ಟಿ 25 ವರ್ಷ ಪೂರೈಸಿದೆ. ಕರ್ನಾಟಕದಾದಂತ್ಯ ರಜತ ಮಹೋತ್ಸವ ಹಬ್ಬ ನಡೆಯುತ್ತಿದೆ, ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿಕೊಂಡು ಬರುತ್ತಿದ್ದಾರೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕೈಜೋಡಿಸುತ್ತಿದ್ದಾರೆ. ಅದರಲ್ಲಿ ಯಾವುದೇ ಎರಡು ಮಾತಿಲ್ಲ ಎಂದರು.
ಬಿಹಾರದಲ್ಲಿ ಎನ್ ಡಿಎ ಗೆಲುವು ದಾಖಲಿಸಿದ ಮಾದರಿಯಲ್ಲಿ 2028ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಎನ್ ಡಿ ಎ ಪಕ್ಷ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗುತ್ತದೆ.
ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದಿಲ್ಲ. ಸಹಕಾರ ಸಂಘಗಳ ಮತ್ತು ಪಪಂ ಹಾಗೂ ಗ್ರಾಮ ಪಂಚಾಯಿತಿಗಳು ಚುನಾವಣೆಗಳಿಗೆ ಬೇರೆ ಪಕ್ಷದ ಸದಸ್ಯಗಳನ್ನು ಸೇರಿಸಿಕೊಳ್ಳುವುದೆ ಇವರ ಅಭ್ಯಾಸವಾಗಿದೆ. ತಾಲೂಕಿನ ಶಾಸಕ ಅನಿಲ್ ಚಿಕ್ಕಮಾದು ರವರು ಸ್ಥಳೀಯ ಯಾವುದೇ ಚುನಾವಣೆಗಳು ಬಂದರೆ ಅಧಿಕಾರ ಹಿಡಿಯಲು ಅವರು ಪಕ್ಷದ ಕಡೆ ಸದಸ್ಯರು ಇಲ್ಲದೆ ಇದ್ದಾಗ ಚುನಾವಣೆ ದಿನಾಂಕವನ್ನು ಮುಂದುವರಿಸುವುದು ಇವರ ಕತೆ. ಪಟ್ಟಣ ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡಿ ಕಳೆದ ಎರಡು ತಿಂಗಳು ಕಳೆದರೂ ತಾಲೂಕು ತಹಶೀಲ್ದಾರ್ ಮೋಹನಕುಮಾರಿ ರವರು ಚುನಾವಣೆ ದಿನಾಂಕವನ್ನು ನಿಗದಿಪಡಿಸಲು ತಾರತಮ್ಯ ಮಾಡಿದ್ದಾರೆ. ನಮ್ಮ ಪಕ್ಷದ ಸದಸ್ಯ ಅವರ ಪಕ್ಷಕ್ಕೆ ಸೇರ್ಪಡೆಗೊಂಡ ನಂತರವೇ ತಹಶೀಲ್ದಾರ್ ರವರು ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ ಎಂದರು.
ತಾಲೂಕಿನ ನಾಲ್ಕು ಕಡೆ ಹುಲಿ ದಾಳಿಗೆ ಮೃತಪಟ್ಟಿರುವ ಘಟನೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ರವರಿಗೆ ತಿಳಿಸಿದ್ದೇವೆ. ಅದರಂತೆ ಮುಂದಿನಗಳಲ್ಲಿ ತಾಲೂಕಿಗೆ ಬಂದು ಎಲ್ಲಾರ ಮನೆಗೆ ಭೇಟಿ ನೀಡಿ ಹುಲಿ ದಾಳಿಗೆ ಮೃತಪಟ್ಟ ಕುಟುಂಬದವರಿಗೆ ಸಾಂತ್ವನ ಹೇಳುತ್ತಾರೆ. ಈ ಸರ್ಕಾರ ಜನರ ರಕ್ಷಣೆ ಮಾಡುತ್ತಿಲ್ಲ, ಅರಣ್ಯ ಇಲಾಖೆ ಸೌಲಭ್ಯಗಳನ್ನು ಒದಗಿಸಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ಜೆಡಿಎಸ್ ಪಕ್ಷದ ಅಧ್ಯಕ್ಷರಾದ ರಾಜೇಂದ್ರ, ಜಿ.ಗೋಪಾಲಸ್ವಾಮಿ, ಒಕ್ಕಲಿಗ ಸಂಘದ ತಾಲೂಕು ಅಧ್ಯಕ್ಷ ಸುಧೀರ್, ಮಾಜಿ ತಾ.ಪಂ. ಅಧ್ಯಕ್ಷ ಹನು, ಜೆಡಿಎಸ್ ಪಕ್ಷದ ಪ್ರದಾನ ಕಾರ್ಯದರ್ಶಿ ಹೂವಿನಕೊಳ ಮಹೇಂದ್ರ, ಮುಖಂಡರು ಪುಟ್ಟ ಹನುಮಯ್ಯ, ಪರಶಿವಮೂರ್ತಿ, ಸಾಗರೆ ಶಂಕರ್, ಮುಳ್ಳೂರು ನಿಂಗರಾಜು, ಬಸವಣ್ಣ, ವೆಂಕಟರಾಮು, ಉದಯಕುಮಾರ್, ವಕೀಲ ಪ್ರಶಾಂತ್, ರಾಮಚಂದ್ರ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


