ಔರಾದ: ತಾಲೂಕಿನ ಕೊಳ್ಳುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೈಷ್ಣವಿ ಕ್ಲಿನಿಕ್ ಹಾಗೂ ಶಿವಾ ಮೆಡಿಕಲ್ ಏಕಾಲಾರ ಅವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಡಾ.ಶಿಲ್ಪಾ ಎಂ. ಪುಲಾರಿ ಅವರು ಜನರ ಆರೋಗ್ಯ ತಪಾಸಣೆ ನಡೆಸಿದರು. ಶಿವ ಮೆಡಿಕಲ್ ಏಕಲಾರನ ಮಾಲೀಕರಾದ ಅಂಬರೀಶ್ ರವರು ಆರೋಗ್ಯ ತಪಾಸಣೆಗೆ ಬಂದ ಜನರಿಗೆ ಉಚಿತ ಔಷಧಿಗಳು ವಿತರಿಸಿದರು.
ಡಾಕ್ಟರ್ ಮಹೇಶ್ ಪುಲಾರಿ, ಡಾಕ್ಟರ್ ಶಿಲ್ಪ ಮಹೇಶ್ ಪುಲಾರಿ ಅವರ ಮದುವೆ ವಾರ್ಷಿಕೋತ್ಸವ ನಿಮಿತ್ತ ಕೊಳ್ಳುರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸುವುದಕ್ಕಾಗಿ ಗ್ರಾಮಸ್ಥರ ವತಿಯಿಂದ ಅವರಿಗೆ ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಮುಖಂಡರಾದ ಸುಧಾಕರ್ ಕೊಳ್ಳುರ, ಶಿವಶಂಕರ ಮಣಿಗಂಪುರೆ, ಬಸವರಾಜ್ ದೆಗಲವಾಡೆ, ಬಂಡೆಪ್ಪ ದಗಲವಾಡೆ, ಗ್ರಾಮ ಪಂಚಾಯತ್ ಸದಸ್ಯರಾದ ಸುಲೋಚನಾ ವಿಜಯಕುಮಾರ್, ವಿಶ್ವನಾಥ್ ದಬಾಡೆ, ಈರಣ್ಣ ವಡಿಯರ, ಶರಣಪ್ಪ, ಅಕ್ಬರ್ ಪಾಷಾ, ಅಜ್ಮುದ್ದೀನ್, ಶಾಲೆ ಪ್ರವಾರಿ ಮುಖ್ಯ ಗುರುಗಳಾದ ರಾಜಕುಮಾರ್ ಚಳ್ಳಕಪುರೆ ಮುಂತಾದವರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


