ತುಮಕೂರು: ಮೂರು ಅಂಗಡಿಗಳ ಶೀಟ್ ಕತ್ತರಿಸಿ ಕಳವು ಮಾಡಿರುವ ಘಟನೆ ಪಾವಗಡ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.
ಇಲ್ಲಿನ ಅಂಗಡಿಗಳ ಮೇಲ್ಛಾವಣಿಯ ಸೀಟುಗಳನ್ನು ಕಳ್ಳರು ಕತ್ತರಿಸಿ ಒಳ ನುಗ್ಗಿ ನಗ ನಾಣ್ಯ ದೋಚಿ ಪರಾರಿಯಾಗಿದ್ದಾರೆ. ಪಾವಗಡ ಹೊಸ ಬಸ್ ನಿಲ್ದಾಣದ ಗುರಪ್ಪಲೇಔಟ್ ನಲ್ಲಿ ಒಂದೇ ರಾತ್ರಿ ಮೂರು ಹೋಲ್ ಸೇಲ್ ಅಂಗಡಿಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.
ಚಂದ್ರಪ್ಪ ಎಂಬುವರಿಗೆ ಸೇರಿದ ಅಶ್ವಿನ್ ಮಾರ್ಕೆಟಿಂಗ್ ಅಂಗಡಿಯ ಮೇಲ್ಬಾವಣಿ ಕತ್ತರಿಸಿ ಒಳ ನುಗ್ಗಿ 2 ಲಕ್ಷ ರೂ. ಹಣ ದೋಚಿದ್ದಾರೆ. ಇದರ ಪಕ್ಕದಲ್ಲೇ ಇರುವ ಸಾಗರ್ ಎಂಬುವರಿಗೆ ಸೇರಿದ ಆರ್. ಎಸ್.ಮೆಗಾ ಹೋಲ್ ಅಂಗಡಿಗೂ ನುಗ್ಗಿ ಹುಂಡಿಯಲ್ಲಿದ್ದ 60 ಸಾವಿರ ರೂ.ಗಳನ್ನು ಕಳ್ಳರು ದೋಚಿದ್ದಾರೆ. ರವಿತೇಜ ಎಂಬುವರಿಗೆ ಸೇರಿದ ಲಕ್ಷ್ಮೀ ಹೋಲ್ ಸೇಲ್ ಅಂಗಡಿಯಲ್ಲಿ ಕಳ್ಳರು ನುಗ್ಗಿದ್ದು, ಅಲ್ಲಿ ಯಾವುದೇ ಕಳ್ಳತನ ಮಾಡಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ. ಘಟನೆ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


