ತುಮಕೂರು: ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ 2025–26 ಸಾಲಿಗೆ ಕೃಷಿಕ್ ಎಂಡೋಮೆಂಟ್ ವಿದ್ಯಾರ್ಥಿ ವೇತನಕ್ಕೆ ಅರ್ಜಿಸಲ್ಲಿಸಲು ಅವಧಿ ವಿಸ್ತರಣೆ ಮಾಡಲಾಗಿದೆ.
ಕೃಷಿಕ್ ಸರ್ವೋದಯ ಫೌಂಡೇಷನ್ (ರಿ) ಇದು ಒಂದು ಧರ್ಮಾರ್ಥ ಸಂಸ್ಥೆಯಾಗಿದ್ದು ಕಳೆದ 33 ವರ್ಷಗಳಿಂದ ಕರ್ನಾಟಕದ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಯುವಕ ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಾ ಬಂದಿದ್ದು, ಸಾವಿರಾರು ಅಭ್ಯರ್ಥಿಗಳು ಇದರ ಅನುಕೂಲತೆ ಪಡೆದಿರುತ್ತಾರೆ. ಇದರ ಜೊತೆಗೆ ಕಳೆದ 13 ವರ್ಷಗಳಿಂದ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಅರ್ಹ ಬಡ ವಿದ್ಯಾರ್ಥಿಗಳಿಗೆ ಕೃಷಿಕ್ ಎಂಡೋಮೆಂಟ್ ವಿದ್ಯಾರ್ಥಿವೇತನವನ್ನು ಕೊಡಲಾಗುತ್ತಿದೆ.
ಗ್ರಾಮೀಣ ಪ್ರದೇಶದ ಶಾಲೆಯಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಈಗ ಪ್ರಥಮ ವರ್ಷದ ಪಿ.ಯು.ಸಿ, ಸ್ನಾತಕ, ವೃತ್ತಿಪರ ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಹಿಂದಿನ (2024–25) ಸಾಲಿನ ಪರೀಕ್ಷೆಯಲ್ಲಿ 80% ಮೇಲ್ಪಟ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ 2025–26ನೇ ಸಾಲಿಗೆ ಕೆ.ಎಸ್.ಎಫ್. ಎಂಡೋಮೆಂಟ್ ವಿದ್ಯಾರ್ಥಿವೇತನ ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ನ.30ರವರೆಗೆ ವಿಸ್ತರಿಸಿದೆ.
ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಈ ವಿಳಾಸಕ್ಕೆ ಕೃಷಿಕ್ ಸರ್ವೋದಯ ಫೌಂಡೇಷನ್ (ರಿ), ನಂ. 15, 2ನೇ ಹಂತ, ಗಾಲ್ಫ್ ಅವೆನ್ಯೂ ರಸ್ತೆ, ಹಳೇ ವಿಮಾನ ನಿಲ್ದಾಣ ರಸ್ತೆ, ಕೋಡಿಹಳ್ಳಿ, ಬೆಂಗಳೂರು–08, ಇಲ್ಲಿಗೆ ಅಂಚೆ ಮೂಲಕ ಮತ್ತು ಅರ್ಜಿಯನ್ನು ವೆಬ್ ವಿಳಾಸ: www.ksfkarnataka.com ದ ಮೂಲಕ ಸಲ್ಲಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗಳಿಗೆ 080–25202299 ಸಂಪರ್ಕಿಸಬಹುದಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


