ಸರಗೂರು: ಪಟ್ಟಣ 4 ನೇ ವಾರ್ಡಿನ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಶನಿವಾರ ರಾತ್ರಿ ಬಾಗಿಲು ಬೀಗ ಒಡೆದು ಕಳ್ಳರು ಕೈಚಳಕ ತೋರಿಸಿ ಪರಾರಿಯಾಗಿದ್ದಾರೆ.
ಪಟ್ಟಣದ ಶಂಕರ್ ಎಂಬುವರ ಮನೆಯಲ್ಲಿ 2 ರಿಂದ 3 ಗಂಟೆ ಸಮಯದಲ್ಲಿ ಕಳ್ಳತನವಾಗಿದೆ ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ. ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳನುಗ್ಗಿ ಬೀರುನಲ್ಲಿದ್ದ ಸುಮಾರು ಚಿನ್ನ ಬೆಳ್ಳಿ 50 ಸಾವಿರ ನಗದು ಹಣದೋಚಿದ್ದಾರೆಂದು ಮನೆಯವರು ತಿಳಿಸಿದ್ದು, ಘಟನೆ ನಡೆದ ಬಗ್ಗೆ ಸುದ್ದಿ ಹರಡಿದಾಕ್ಷಣ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು.
ಅಕ್ಕಪಕ್ಕದ ಮನೆಯವರು ನನಗೆ ಕರೆ ಮಾಡಿ ನಿಮ್ಮ ಮನೆ ಕಳ್ಳತನವಾಗಿದೆ ಎಂದು ತಿಳಿಸಿದರು. ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ, ಮನೆಯಲ್ಲಿ ನಮ್ಮ ತಾಯಿ ಇದ್ದರು. ಅವರು ಎರಡು ಹಿಂದೆ ನಮ್ಮ ಅಜ್ಜಿ ಮನೆಗೆ ಹೋಗಿದ್ದರು. ಮನೆಯಲ್ಲಿ ಹಣ 50 ಸಾವಿರ ಹಾಗೂ ಚಿನ್ನ ಮತ್ತು ಮನೆಯ ದಾಖಲೆ ಹಾಗೂ ವಿವಿಧ ಪತ್ರಗಳನ್ನು ಹರಿದು ಹಾಕಿ ಆಚೆ ಹಾಕಿ ಮನೆಯಲ್ಲಿರುವ ಬೀರು ಮುರಿದು ವಸ್ತುಗಳ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ನಂತರ ಪಟ್ಟಣ ಪೋಲಿಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ತಿಳಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


