ತುಮಕೂರು: ತಾಲ್ಲೂಕಿನ ಪಂಡಿತನ ಹಳ್ಳಿ ಸಮೀಪದ ಮಂದರ ಗಿರಿ ಬೆಟ್ಟದಲ್ಲಿರುವ ಗುರು ಮಂದಿರ ದೇವಾಲಯದ 450 ಮೆಟ್ಟಿಲುಗಳನ್ನು 2 ವರ್ಷ 2 ತಿಂಗಳ ಮಗು ಭುವನ್ ರೆಡ್ಡಿ 23 ನಿಮಿಷ 8 ಸೆಕೆಂಡ್ ಗಳಲ್ಲಿ ಹತ್ತಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
2 ವರ್ಷ 2 ತಿಂಗಳ ಮಗು ಆಗಿರುವ ಭುವನ್ ರೆಡ್ಡಿ, ವಿ. ಅನುಷಾ ಮತ್ತು ಡಿ. ರೆಡ್ಡಿ ಜಗದೀಶ್ ಎಂಬವರ ಪುತ್ರ. ಇಂಡಿಯಾ ಬುಕ್ ಆಫ್ ರೆಕಾರ್ಡ್ ಕೀರ್ತಿಗೆ ಪಾತ್ರನಾಗಿರುವ ಈ ಮಗು ಭಾರತೀಯ ವಿಶ್ವದಾಖಲೆಯ ಪ್ರಮಾಣ ಪತ್ರವನ್ನು ಸಹ ಮುಡಿಗೇರಿಸಿಕೊಂಡಿದೆ.
ಈ ಪ್ರಶಸ್ತಿ ಪಡೆಯುವಾಗ ಭುವನ್ ರೆಡ್ಡಿಗೆ 1 ವರ್ಷ 4 ತಿಂಗಳಾಗಿತ್ತು. 20 ಕ್ಕೂ ಹೆಚ್ಚು ನಿಮಿಷಗಳ ಕಾಲ ವಿರಾಮವಿಲ್ಲದೆ ನಿರಂತರವಾಗಿ ಬರಿಗಾಲಿನಲ್ಲಿ ಏರಿದ್ದು, 1.5 ಕ್ಕೂ ಹೆಚ್ಚು ಕಿ.ಮೀ. ದೂರವನ್ನು ಕ್ರಮಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಸೃಷ್ಟಿಸಿದ.
ನ್ಯಾಯಾಧೀಶರಾದ ಕೆ. ಮಾಧವ ರೆಡ್ಡಿ, ಡಾ.ಜೆ. ಪಾವನಿ ಮತ್ತು ಡಾ.ಕೆ.ಸ್ವರ್ಣ ಶ್ರೀ ಅವರು ಹೈದರಾಬಾದ್ ನಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತೀರ್ಪು ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


