ತುಮಕೂರು: ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆಯ ಧರ್ತಿ ಆಭಾ ಜನ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಹಾಗೂ ಜೀವಂತ ಮೀನು ಮಾರಾಟ ಮಳಿಗೆಗಾಗಿ ಸಹಾಯಧನ ಸೌಲಭ್ಯ ಕಲ್ಪಿಸಲು ಮೀನುಗಾರಿಕೆಯಲ್ಲಿ ತೊಡಗಿರುವ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ದೊಡ್ಡ ಎಣ್ಣೆಗೆರೆ ಗ್ರಾಮ ಪಂಚಾಯತಿಯ ದೊಡ್ಡಹುಲ್ಲೇನಹಳ್ಳಿ, ಮತ್ತಿಘಟ್ಟ ಗ್ರಾಪಂ, ಮಾದಾಪುರ, ಬರಕನಾಳು ಗ್ರಾಪಂ, ಹಂದಿಗನಾಡು ಹಾಗೂ ರಾಮನಹಳ್ಳಿ ಗ್ರಾಪಂ, ಜಾಣೇಹಾ, ಶಿರಾ ತಾಲ್ಲೂಕು ರಾಮಲಿಂಗಪುರ ಗ್ರಾಪಂ, ಕುಂಬಾರಹಳ್ಳಿ, ಮಾರಗೊಂಡನಹಳ್ಳಿ, ಗೋಪಾಲದೇವರಹಳ್ಳಿ ಗ್ರಾಪಂ, ಬಟ್ಟಿಗಾನಹಳ್ಳಿ ಸಿದ್ಧಕೋಣ, ಚಿನ್ನೇನಹಳ್ಳಿ ಗ್ರಾಪಂ, ಜೋಡಿದೇವರಹಳ್ಳಿ, ಸಲುಪರಹಳ್ಳಿ: ಪಾವಗಡ ತಾಲ್ಲೂಕು ಪೋತಗಾನಹಳ್ಳಿ ಗ್ರಾಪಂ. ದಳವಾಯಿಹಳ್ಳಿ, ಹೊಸದುರ್ಗ, ಚಿಕ್ಕನಹಳ್ಳಿ ಗ್ರಾಪಂ, ಹನುಮನಬೆಟ್ಟ, ರಂಗಸಮುದ್ರ ಗ್ರಾ.ಪಂ. ರಂಗಸಮುದ್ರ, ಬೆಳ್ಳಿಬಟ್ಟು, ಮರಿದಾಸನಹಳ್ಳಿ ಗ್ರಾಪಂ. ಹನುಮಂತನಹಳ್ಳಿ, ನ್ಯಾಯದಗುಂಟೆ ಗ್ರಾಪಂ. ಹೊಟ್ಟೆಬೊಮ್ಮನಹಳ್ಳಿ, ಮಧುಗಿರಿ ತಾಲ್ಲೂಕು ಹೊಸಕೆರೆ ಗ್ರಾಪಂ, ಬಸವನಹಳ್ಳಿ, ಚಿಕ್ಕದಾಳವಟ್ಟ ಗ್ರಾ.ಪಂ. ವಿಟ್ಲಾಪುರ, ಕೊಡಿಗೇನಹಳ್ಳಿ ಗ್ರಾಪಂ, ಗುಟ್ಟೆ, ಸಿಂಗನಹಳ್ಳಿ ಗ್ರಾ.ಪಂ. ಮುತ್ಯಾಲಮ್ಮನಹಳ್ಳಿ ಕೊರಟಗೆರೆ ತಾಲ್ಲೂಕು ಪಂಚಹಳ್ಳಿ ಗ್ರಾಪಂ, ಹಂಚಿಹಳ್ಳಿ; ತುಮಕೂರು ತಾಲ್ಲೂಕು ಸೋರೆಕುಂಟೆ ಗ್ರಾಪಂ, ಲಿಂಗೇನಹಳ್ಳಿ, ಬೆಳ್ಳಾವಿ ಗ್ರಾಪಂ, ದೊಡ್ಡವೀರನಹಳ್ಳಿ ಊರುಕೆರೆ ಗ್ರಾಪಂ, ಕುನ್ನೂರು, ಗುಬ್ಬಿ ತಾಲ್ಲೂಕು ಶಿವಪುರ ಗ್ರಾಪಂ, ಉಂಗನಾಳ, ನಲ್ಲೂರು ಗ್ರಾಪಂ, ಕಲ್ಲುಗುಡಿ, ಇರಕಸಂದ್ರ ಗ್ರಾಮ. ಜಾಲಗುಣಿ ಹಾಗೂ ಅಳಿಲುಘಟ್ಟ ಗ್ರಾಮ ಪಂಚಾಯತಿಯ ಸಾಗಸಂದ್ರ ಗ್ರಾಮದಲ್ಲಿನ ಮೀನುಗಾರರು ಮಾತ್ರ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಡಿಸೆಂಬರ್ 6 ಕಡೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕ ಕಚೇರಿಯನ್ನು ಸಂಪರ್ಕಿಸಬೇಕೆಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


