ಸರಗೂರು: ಈ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸುದೀರ್ಘವಾಗಿ ಎಲ್ಲ ದೇಶದ ಸಂವಿಧಾನ ಅಧ್ಯಯನ ಮಾಡಿ ಭಾರತ ದೇಶಕ್ಕೆ ಬೇಕಾದಂತಹ ಎಲ್ಲಾ ಧರ್ಮ ಜಾತಿ ಮತಕ್ಕೆ ಬೇಕಾಗುವಂತ ಸಂವಿಧಾನವನ್ನು ರಚನೆ ಮಾಡದಿದ್ದರೆ, ನಾವು ಸ್ವತಂತ್ರರಾಗಿ ಸಮಾನರಾಗಿ ಅರ್ಥಪೂರ್ಣವಾದ ಬದುಕನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಎಸ್.ಡಿ.ಸಣ್ಣಸ್ವಾಮಿ ಎಂದರು.
ಪಟ್ಟಣದ ನಾಲ್ಕನೇ ವಾರ್ಡಿನ ಅಂಬೇಡ್ಕರ್ ಭವನದಲ್ಲಿ ಬುಧವಾರದಂದು ಸಂವಿಧಾನ ಸಮರ್ಪಣಾ ದಿನವನ್ನು ಸಂವಿಧಾನ ಪೀಠಿಕೆ ಹಾಗೂ ಅಂಬೇಡ್ಕರ್ ರವರ ಪೋಟೋ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಭಾರತ ಸಂವಿಧಾನ ನವೆಂಬರ್ 26– 1949 ನೇ ದಿನದಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತ ಸರ್ಕಾರಕ್ಕೆ ಅರ್ಪಣೆ ಮಾಡಿದ ದಿನದ ಅಂಗವಾಗಿ ನಾವು ಸಂವಿಧಾನ ಸಮರ್ಪಣ ದಿನ ಎಂದು ಆಚರಿಸುತ್ತೇವೆ ಎಂದರು.
ಈ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡಿದರೆ, ಇಂದು ಭಾರತೀಯರೆಲ್ಲರೂ ಶ್ರೀಮಂತಿಕೆಯಿಂದ ಉತ್ತಮ ಜೀವನವನ್ನು ಮಾಡಬಹುದಿತ್ತು. ಆದರೆ ಅಂಬೇಡ್ಕರ್ ಅವರ ಸಂವಿಧಾನವನ್ನು ಸಂಪೂರ್ಣ ಜಾರಿ ಮಾಡಲು ಅಂದಿನ ಮತ್ತು ಇಂದಿನ ಸರಕಾರಗಳು ವಿಫಲವಾಗಿವೆ. ಹಾಗಾಗಿ ನಾವೆಲ್ಲರೂ ಉತ್ತಮವಾದ ಜ್ಞಾನವನ್ನು ಪಡೆದುಕೊಳ್ಳಲು ಶಿಕ್ಷಣವನ್ನು ಪಡೆಯಬೇಕು ಉದ್ಯೋಗವಂತರಾಗಬೇಕು ಬಾಬಾ ಸಾಹೇಬ ಮಾರ್ಗದಲ್ಲಿ ನಡೆಯಬೇಕೆಂದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆದಿ ಕರ್ನಾಟಕ ಮಾಜಿ ಅಧ್ಯಕ್ಷ ಶಿವಣ್ಣ ಮತ್ತು ಗ್ರಾಮದ ಯಜಮಾನರು ಭೋಗಪ್ಪ , ಮಹದೇವಯ್ಯ, ಟ್ರಸ್ಟ್ ಪದಾಧಿಕಾರಿಗಳಾದ ಚಿಕ್ಕ ಸ್ವಾಮಿ, ಗೋಪಾಲ್, ಕಾರಯ್ಯ, ಮುಖಂಡರಾದ ಇದಿಯಪ್ಪ, ಬಣ್ಣಯ್ಯ, ದೊಡ್ಡಬೈರ, ಬಿಲ್ಲಯ್ಯ, ಭೀಮ, ಪರಶಿವ, ನಂಜುಂಡಯ್ಯ, ಮುಖಂಡರು ಸೇರಿದಂತೆ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


