ಬೀದರ್: ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮದ ವಾರ್ಡ್ ನಂಬರ್ 2ರಲ್ಲಿ ರಸ್ತೆ ಇಲ್ಲದೇ ಸಾರ್ವಜನಿಕರು ಪಡುತ್ತಿರುವ ಸಂಕಷ್ಟದ ಬಗ್ಗೆ ಇತ್ತೀಚೆಗೆ ನಮ್ಮ ತುಮಕೂರು ಮಾಧ್ಯಮ ವರದಿ ಮಾಡಿತ್ತು. ಈ ವರದಿಯ ಬೆನ್ನಲ್ಲೇ ಇದೀಗ ಗ್ರಾಮ ಪಂಚಾಯತ್ ಹೊಸ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದೆ.
“ಗದ್ದೆಯಂತಾದ ರಸ್ತೆ: ಬೆಳಕುಣಿ ಚೌದ್ರಿ ಗ್ರಾಮದ ವಾರ್ಡ್ ನಂಬರ್ 2ರಲ್ಲಿ ಅವ್ಯವಸ್ಥೆ, ಗಾಢ ನಿದ್ರೆಯಲ್ಲಿರುವ ಅಧಿಕಾರಿಗಳು” ಎಂಬ ಶೀರ್ಷಿಕೆಯಡಿಯಲ್ಲಿ ಸೆ.14ರಂದು ನಮ್ಮ ತುಮಕೂರು ಸವಿವರವಾದ ವರದಿಯನ್ನು ಪ್ರಕಟ ಮಾಡಿತ್ತು. ಈ ವರದಿ ಪ್ರಕಟವಾದ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶೀಘ್ರವೇ ಸಿಸಿ ರಸ್ತೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಇದೀಗ ಕೊಟ್ಟ ಮಾತಿನಂತೆ ಅಧಿಕಾರಿಗಳು ನಡೆದುಕೊಂಡಿದ್ದು, ಸಿಸಿ ರಸ್ತೆ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಸಂಬಂಧಿಸಿದ ವರದಿ ಓದಿ: ಗದ್ದೆಯಂತಾದ ರಸ್ತೆ: ಬೆಳಕುಣಿ ಚೌದ್ರಿ ಗ್ರಾಮದ ವಾರ್ಡ್ ನಂಬರ್ 2 ರಲ್ಲಿ ಅವ್ಯವಸ್ಥೆ: ಗಾಢ ನಿದ್ದೆಯಲ್ಲಿರುವ ಅಧಿಕಾರಿಗಳು
ಹೊಸ ಸಿಸಿ ರಸ್ತೆಯ ನಿರ್ಮಾಣದಿಂದಾಗಿ ಕಳೆದ ಮೂರು ವರ್ಷಗಳಿಂದ ಕೆಸರುಮಯ ರಸ್ತೆಯಿಂದ ಬೇಸತ್ತು ಹೋಗಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಬೆಳಕುಣಿ ಚೌದ್ರಿ ಗ್ರಾಮದ ಪಿಡಿಓ ಆತ್ಮರಾಮ್ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದು, ಸಾರ್ವಜನಿಕರ ಪರವಾಗಿ ಕೆಲಸ ಮಾಡಿರುವುದು ಅಭಿನಂದನೀಯವಾಗಿದೆ.
ನಮ್ಮತುಮಕೂರು ವರದಿಯ ಫಲಶೃತಿಯಿಂದಾಗಿ ಇಂದು ಹೊಸ ರಸ್ತೆ ನಿರ್ಮಾಣಗೊಂಡಿದೆ. ಮಾಧ್ಯಮಕ್ಕೆ ಸ್ಥಳೀಯರು ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೇ ತಾಲೂಕು ಅಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷರು, ಪಿಡಿಒ, ಗ್ರಾ.ಪಂ. ಸದಸ್ಯರಾದ ದೇವಿದಾಸ ಧೂಳೆ, ಕರಬಪ್ಪಾ ಸೊರಾಳೆ, ನಮ್ಮತುಮಕೂರು ಬೀದರ್ ಜಿಲ್ಲಾ ವರದಿಗಾರರ ಅರವಿಂದ ಮಲ್ಲಿಗೆ, ಮಾಜಿ ಶಿಕ್ಷಕರಾದ ಸತ್ಯನಾರಾಯಣ ರಾಜಪುತ ಅವರಿಗೆ ಗ್ರಾಮಸ್ಥರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


