ತುಮಕೂರು: ತುಮಕೂರು ಗಾಯನ ಸಭಾ(ರಿ) ವತಿಯಿಂದ ನವೆಂಬರ್ 30ರ ಭಾನುವಾರದಂದು ನಗರದ ಟೌನ್ ಹಾಲ್ ಸಮೀಪವಿರುವ ಶ್ರೀ ಸಿದ್ದಗಂಗಾ ಪದವಿ ಕಾಲೇಜಿನ ಡಾ.ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಬೆಂಗಳೂರಿನ ಸಂಗೀತ ವಿದುಷಿ ಜೆ, ಯೋಗಕೀರ್ತನ ರವರಿಂದ ಅಮೋಘ ಸಂಗೀತ ಕಛೇರಿ ಏರ್ಪಡಿಸಲಾಗಿದೆ.
ಪಕ್ಕವಾದ್ಯದಲ್ಲಿ ಮೃದಂಗ: ಅನಿರುದ್ಧ್ ಎಸ್.ಭಟ್, ಪಿಟೀಲು: ಅದಿತಿ ಕೃಷ್ಣಪ್ರಕಾಶ್, ಖಂಜಿರ: ರಾಜಾಪುರಂ ಆರ್ ಕಾರ್ತಿಕ್ ರವರುಗಳು ವಾದ್ಯ ಸಹಕಾರ ನೀಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತ ವಿದ್ವಾಂಸರುಗಳು, ಸಂಗೀತಾಸಕ್ತರು ಆಗಮಿಸಲು ಸಭಾವತಿಯಿಂದ ಕೋರಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


