ತುಮಕೂರು: ಡಕಾಯಿತಿಗೆ ಸಂಚು ರೂಪಿಸಿ, ಮಾರಕಾಸ್ತ್ರ ಹಿಡಿದು ಕುಳಿತಿದ್ದ ಐವರು ಖದೀಮರನ್ನು ಹೊಸ ಬಡಾವಣೆಯ ಪೊಲೀಸರು ಬಂಧಿಸಿದ್ದಾರೆ.
ವಿಕಾಸ್ ಅಲಿಯಾಸ್ ವಿಕ್ಕಿ, ವಿನಯ್ ಅಲಿಯಾಸ್ ಕಂಟಿ, ಮಂಜುನಾಥ್ ಅಲಿಯಾಸ್ ಟುವ್ವ ಜೀವನ್ ಅಲಿಯಾಸ್ ಜೀವ, ಆಕಾಶ್ ಬಂಧಿತ ಆರೋಪಿಗಳಾಗಿದ್ದಾರೆ.
ವಿಕಾಸ್ ಎಂಬಾತ ನೆಲಮಂಗಲದವನಾಗಿದ್ದು, ಉಳಿದವರು ತುಮಕೂರು ತಾಲ್ಲೂಕಿನ ಊರುಕೆರೆ, ಕೋರ, ತಿಮ್ಮಲಾಪುರದ ನಿವಾಸಿಗಳು. ಬಂಧಿತರಿಂದ ಮಚ್ಚು, ಲಾಂಗ್, ಡ್ರಾಗರ್, ಖಾರದ ಪುಡಿಯನ್ನು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಹೊಸ ಬಡಾವಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


