ತುಮಕೂರು: ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ ಹೊಸದಾಗಿ 2,521 ಜನರಲ್ಲಿ ಎಚ್ ಐವಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.
ವರದಿಗಳ ಪ್ರಕಾರ, 2020–21ರಿಂದ 2024–25ರ ವರೆಗೆ 6,12,730 ಸಾಮಾನ್ಯ ಜನರು ಎಚ್ ಐವಿ ಪರೀಕ್ಷೆಗೆ ಒಳಗಾಗಿದ್ದಾರೆ. ಈ ಪೈಕಿ 2,406 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೇ ಅವಧಿಯಲ್ಲಿ 2,92,870 ಗರ್ಭಿಣಿಯರು ಪರೀಕ್ಷೆ ಮಾಡಿಸಿಕೊಂಡಿದ್ದು, 145 ಮಹಿಳೆಯರಲ್ಲಿ ಎಚ್‌ಐವಿ ಇರುವುದು ಖಚಿತ ಪಟ್ಟಿದೆ. ಗರ್ಭಿಣಿಯರಲ್ಲಿ ಸೋಂಕು ಹರಡುವಿಕೆ ಇಳಿಮುಖವಾಗುತ್ತಿದೆ.
2022–23ರಲ್ಲಿ 482 ಮಂದಿಗೆ ಸೋಂಕು ಹರಡಿತ್ತು. 2024–25ರಲ್ಲಿ 530ಕ್ಕೆ ಜಿಗಿದಿದೆ. ಪ್ರಸ್ತುತ ಜಿಲ್ಲೆಯಾದ್ಯಂತ 14,178 ಸೋಂಕಿತರಿದ್ದಾರೆ. ಇದರಲ್ಲಿ 20ರಿಂದ 40 ವರ್ಷದ ಒಳಗಿನವರ ಸಂಖ್ಯೆ ಹೆಚ್ಚಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಎಚ್ ಐವಿ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡುವ ಉದ್ದೇಶದಿಂದ ಜಿಲ್ಲಾ ಆಸ್ಪತ್ರೆ ಸೇರಿ ಒಟ್ಟು 6 ಕಡೆಗಳಲ್ಲಿ ಎಆರ್‌ಟಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಕೇಂದ್ರಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆ, ಔಷಧಿ ವಿತರಿಸಲಾಗುತ್ತದೆ. ರೋಗಿಗಳಿಗೆ ಆಪ್ತ ಸಮಾಲೋಚನೆ, ಸೂಕ್ತ ಮಾರ್ಗದರ್ಶನ ಒಳಗೊಂಡಂತೆ ಉಚಿತವಾಗಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


