ಮಧುಗಿರಿ: ಕನ್ನಡ ರಾಜ್ಯೋತ್ಸವ ನವೆಂಬರ್‌ಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು ಎಂದು ವಿಧಾನಸಭಾ ಸಚಿವಾಲಯದ ನಿರ್ದೇಶಕ ಶಶಿಧರ್ ತಿಳಿಸಿದರು.
ಪಟ್ಟಣದ ಏಕಾಶಿಲಾ ಬೆಟ್ಟದಲ್ಲಿ ರಕ್ತದಾನಿ ಶಿಕ್ಷಕರ ಬಳಗ, ರೋಟರಿ ಕ್ಲಬ್, ಕನ್ನಡ ಪರ ಸಂಘಟನೆಗಳು, ಸರ್ಕಾರಿ ನೌಕರ ಸಂಘದಿಂದ ಭಾನುವಾರ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಮಾತನಾಡಿದರು. ಪ್ರತಿಯೊಬ್ಬರೂ ಕನ್ನಡದ ಬಗ್ಗೆ ಗೌರವ ಮತ್ತು ಪ್ರೀತಿ ತೋರಬೇಕು ಎಂದರು.
ಏಕಾಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಕಾಮಗಾರಿ ಶೀಘ್ರ ಪ್ರಾರಂಭವಾಗಲಿದೆ. ಕಾಮಗಾರಿ ಪೂರ್ಣಗೊಂಡರೆ ಮಧುಗಿರಿ ಸಾಕಷ್ಟು ಅಭಿವೃದ್ಧಿ ಹೊಂದುತ್ತದೆ ಎಂದರು.
ಶಿಕ್ಷಕರ ಬಳಗದ ಶಶಿಕುಮಾರ್ ಮಾತನಾಡಿ, ರಕ್ತದಾನಿ ಶಿಕ್ಷಕರ ಬಳಗದಿಂದ ಕಳೆದ ಒಂಬತ್ತು ವರ್ಷಗಳಿಂದ ನಿರಂತರವಾಗಿ ಏಕಶಿಲಾ ಬೆಟ್ಟದಲ್ಲಿ ರಾಜ್ಯೋತ್ಸವ ನಡೆಸಲಾಗುತ್ತಿದೆ. ಇಂದಿನ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು ವಿಶೇಷವಾಗಿತ್ತು ಎಂದು ತಿಳಿಸಿದರು.
ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರಂಗಪ್ಪ, ರೋಟರಿ ಕ್ಲಬ್ ಅಧ್ಯಕ್ಷ ನಟರಾಜು, ಕನ್ನಡ ಸಂಘಟನೆಗಳ ರಾಘವೇಂದ್ರ, ನಂದೀಶ್, ಗೀತಾ ನಾಗರಾಜು, ಲತಾ ಪ್ರದೀಪ್, ಕೀರ್ತಿಶ್ರೀ, ರಕ್ತದಾನಿ ಶಿಕ್ಷಕರ ಬಳಗದ ರಾಮದಾಸ್, . ಶಿಲ್ಪ ಹಾಗೂ ಲಾಲಾಪೇಟೆ ಮಂಜುನಾಥ್ ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


