ಮಧುಗಿರಿ: ಹಿಮದಿಂದಾಗಿ ರಸ್ತೆ ಸರಿಯಾಗಿ ಕಾಣದೆ ಕಾರೊಂದು ಪಲ್ಟಿ ಹೊಡೆದು ಪತಿ ಪತ್ನಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.
ತಾಲೂಕಿನ ಕಸಬಾ ವ್ಯಾಪ್ತಿಯ ಜಡೆಗೊಂಡನಹಳ್ಳಿ ಗ್ರಾಮದ ಮಧುಗಿರಿ ಪಾವಗಡ ರಸ್ತೆಯಲ್ಲಿರುವ ಬ್ರಿಡ್ಜ್ ಸಮೀಪ ಮಂಜು ಮುಸುಕಿದ ರಸ್ತೆಯಲ್ಲಿ ರಸ್ತೆ ಕಾಣದ ಪರಿಣಾಮ ಕಾರು ಪಲ್ಟಿ ಹೊಡೆದಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಡಕಶಿರಾ ತಾಲೂಕಿನ ಗುಡ್ಡಂಪಲ್ಲಿ ಗ್ರಾಮದ ಕೃಷ್ಣ ರೆಡ್ಡಿ(45) ಹಾಗೂ ಜ್ಯೋತಿ ಲಕ್ಷ್ಮೀ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


