ಮಧುಗಿರಿ: ಡೈರಿಯಲ್ಲಿ ಹಾಲು ತರಲು ಹೋಗಿ ವಾಪಸ್ ಬರುತ್ತಿದ್ದ ವ್ಯಕ್ತಿ ಮೇಲೆ ಕಾರು ಹರಿದು ವ್ಯಕ್ತಿಯ ಎರಡೂ ಕಾಲುಗಳು ಮುರಿದಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಮಿಡಿಗೇಶಿ ಹೋಬಳಿಯ ಹೊಸಕೆರೆ ಗ್ರಾಮವಾಸಿ ನಾಗಭೂಷಣ(45) ಎಂದಿನಂತೆ ಮುಖ್ಯ ರಸ್ತೆ ದಾಟಿ ಡೇರಿಯಲ್ಲಿ ಹಾಲು ತೆಗೆದುಕೊಂಡು ವಾಪಸ್ ಬರುತ್ತಿದ್ದಾಗ ಹಿಂಬದಿಯಿಂದ ಬಂದ ನೆರೆಯ ಆಂಧ್ರ ನೋಂದಣಿಯ ಕಾರು ಪಾದಚಾರಿಯ ಮೇಲೆ ಹರಿದಿದೆ.
ಸದ್ಯ ನಾಗಭೂಷಣರನ್ನು ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಡೇರಿಯ ಸಮೀಪ ಕಾಲೇಜು ಸಹ ಇದ್ದು, ಇದೇ ಸ್ಥಳದಲ್ಲಿ ಹಲವಾರು ಬಾರಿ ಅಪಘಾತಗಳು ಸಂಭವಿಸಿವೆ. ರಸ್ತೆಯ ಸುರಕ್ಷತಾ ಕ್ರಮಗಳು ಮತ್ತು ಅಪಘಾತಗಳಾಗದಂತೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


