ತುಮಕೂರು: ಡಿ.29ರಂದು ತುಮಕೂರು ನಗರದ ಗಾಜಿನ ಮನೆಯಲ್ಲಿ ನಡೆಯಲಿರುವ 17 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಡಿ.11ರ ಬುಧವಾರದಂದು 10 ಗಂಟೆಯಿಂದ ಕನ್ನಡ ಭವನ ಅಮಾನಿಕರೆ ರಸ್ತೆ ಇಲ್ಲಿ ಕನ್ನಡ ನೆಲ ಜಲಭಾಷೆ ಕುರಿತಾದ ಈ ಕೆಳಕಂಡ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕನ್ನಡ ನಾಡು ನುಡಿಯ ಕುರಿತಾದ ಭಾವಗೀತೆಗಳು ಹೆಸರು ನೋಂದಾಯಿಸಲು ಸಂಪರ್ಕಿಸಿ: ಪಾರ್ವತಮ್ಮ ರಾಜಕುಮಾರ್–9845536081, ಶೈಲಜ– 9740347080. ಕನ್ನಡ ಮತ್ತು ಕರ್ನಾಟಕದ ಕವಿ ಮತ್ತು ಕವಯತ್ರಿಯರ ವೇಷಭೂಷಣ ಸ್ಪರ್ಧೆ ಹೆಸರು ನೋಂದಾಯಿಸಲು ಸಂಪರ್ಕಿಸಿ: ಗಂಗಲಕ್ಷ್ಮೀ.ಬಿ.: 8431728439, ಮುಮ್ತಾಜ್-9986569356
ಕನ್ನಡ ನಾಡು ನುಡಿಗೆ ಸಂಬಂಧಿಸಿದ ಜನಪದ ನೃತ್ಯ (ಚಲನಚಿತ್ರ ಗೀತೆಗಳನ್ನು ಹೊರತು ಪಡಿಸಿ) ಹೆಸರು ನೋಂದಾಯಿಸಲು ಸಂಪರ್ಕಿಸಿ: ಚಂದ್ರಶೇಖರ್ –6361234348, ಅಮ್ಮಾಜಕ್ಕೆ ಎಲ್, ಎಮ್.9741080241
ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯುತ್ತದೆ. ರಿಯ ವಿಭಾಗ: 12–20 ವರ್ಷ, ಹಿರಿಯ ವಿಭಾಗ: 21–40 ವರ್ಷ, 40 ವರ್ಷ ಮೇಲ್ಪಟ್ಟವರು. ಒಬ್ಬರು ಒಂದೇ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಸ್ಪರ್ಧೆಯಲ್ಲಿ ಮಕ್ಕಳು, ಮಹಿಳೆಯರು ಪುರುಷರು ಭಾಗವಹಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಕೆ. ಎಸ್.ಸಿದ್ದಲಿಂಗಪ್ಪನವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


