ಸರಗೂರು: ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ ಅವಕಾಶ ಸಿಕ್ಕಾಗ ಪ್ರಬುದ್ಧತೆಯ ಪ್ರದರ್ಶನಕ್ಕೆ ಶಿಕ್ಷಕರು, ಪೋಷಕರು ಪ್ರೋತ್ಸಾಹಿಸಬೇಕೆಂದು ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ನಾಗೇಂದ್ರ ಕುಮಾರ್ ಹೇಳಿದರು.
ತಾಲೂಕಿನ ಕೆ.ಬೆಳತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಪದನಿಮಿತ್ತ ಕ್ಷೇತ್ರ ಸಮನ್ವಯಾಧಿಕಾರಿಗಳ ಸಹಾಯದೊಂದಿಗೆ ಕೆ.ಬೆಳತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 25–26 ನೇ ಸಾಲಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಪ್ರತಿಭೆ ಅಡಗಿರುತ್ತದೆ. ಅವನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿಭೆ ಗುರುತಿಸಿ, ವೇದಿಕೆಗಳಲ್ಲಿ ಪ್ರದರ್ಶನಕ್ಕೆ ಉತ್ತೇಜನ ನೀಡಿ, ಹೊರ ಜಗತ್ತಿಗೆ ತಿಳಿಸುವ ಪ್ರಯತ್ನ ಮಾಡಬೇಕು. ಶಾಲಾ ಮಟ್ಟದಲ್ಲಿ ಇಂತಹ ಪ್ರತಿಭೆಗಳನ್ನು ಗುರುತಿಸಿದರೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲೂ ಭಾಗವಹಿಸುವ ಅವಕಾಶವಿದೆ. ಇದರಿಂದ ಅವರು ಜೀವನದಲ್ಲಿ ಮತ್ತಷ್ಟು ಸಂಶೋಧನೆ–ಪ್ರಯೋಗಗಳನ್ನು ಮಾಡುತ್ತಾರೆಂದು ಹೇಳಿದರು.
ನಂತರ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜುರವರು ವಿದ್ಯಾರ್ಥಿಗಳು ಶಿಕ್ಷಣದಷ್ಟೇ ಆರೋಗ್ಯದ ಬಗ್ಗೆ ಗಮನ ಕೊಟ್ಟು ಯೋಗಾಭ್ಯಾಸ ನಾನಾ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ದೈಹಿಕ ಮತ್ತು ಮಾನಸಿಕ ಆಧ್ಯಾತ್ಮಿಕ ಸಾಂಸ್ಕೃತಿಕ ಸೇವಾ ಮನೋಭಾವ ಬೆಳೆಸಿಕೊಂಡು ಉತ್ತಮ ಸಾಕ್ಷರ ಪ್ರಜೆಗಳಾಗಿ ಬೆಳೆಯಬೇಕೆಂದು ತಿಳಿಸಿದರು.
ಮಕ್ಕಳಲ್ಲಿರುವ ಪ್ರತಿಭೆಯನ್ನು ಕಾರಂಜಿಯಂತೆ ಹೊರ ತರಲು ವರ್ಷಕ್ಕೆ ನಾಲ್ಕಾರು ಕಾರ್ಯಕ್ರಮಗಳನ್ನು ನಡೆಸಿ ಮಕ್ಕಳಲ್ಲಿರುವ ಸಾಕ್ಷರತೆ ಕ್ರಿಯಾಶೀಲಗೊಳಿಸಬೇಕು. ಕೇವಲ ಸರಕಾರದ ಆದೇಶಕ್ಕಾಗಿ ಮಾತ್ರ ಕಾರ್ಯಕ್ರಮ ರೂಪಿಸದೆ, ಮಕ್ಕಳ ಏಳಿಗೆಗಾಗಿ ಕಾರ್ಯಕ್ರಮ ಆಯೋಜಿಸಬೇಕೆಂದು ಹೇಳಿದರು.
ಗ್ರಾಪಂ ಸದಸ್ಯ ರುದ್ರಯ್ಯ ಮಾತನಾಡಿ, ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ನಡೆಸುವುದರಿಂದ ಮಕ್ಕಳಲ್ಲಿನ ಕಲಿಕಾ ಕ್ರಿಯಾಶೀಲತೆ ಹೆಚ್ಚಾಗಿ, ಪ್ರತಿಭಾವಂತ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಗೆ ಒತ್ತು ಕೊಟ್ಟು ಉನ್ನತ ಶಿಕ್ಷಣದ ಗುರಿ ಹೊಂದುತ್ತಾರೆಂದು ಹೇಳಿದರು.
ಕಾರ್ಯಕ್ರಮ ಮುನ್ನ ಪ್ರಮುಖ ಬೀದಿಗಳಲ್ಲಿ ಗಣ್ಯರನ್ನು ಎತ್ತಿನಗಾಡಿಯಲ್ಲಿ ಮೂಲಕ ಮೆರವಣಿಗೆ ನಡೆಯಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಿ ಅಂಕಯ್ಯ,ಗ್ರಾಪಂ ಸದಸ್ಯರಾದ ರುದ್ರಯ್ಯ, ಚಿಕ್ಕಲಾನಾಯಕ, ರತ್ನಮ್ಮ ಸಿದ್ದನಾಯಕ, ಭರತ್, ನಾಗರಾಜು, ಯಜಮಾನರು ಸುಂದರ ಗೌಡ, ನಾಗರಾಜು, ರಾಜೇಗೌಡ, ಜವರಯ್ಯ, ಸಿದ್ದನಾಯಕ, ದೇವರಾಜು, ಚಾಮರಾಜು, ಸಿದ್ದನಾಯಕ, ಅಂಗಡಿ ಶ್ರೀನಿವಾಸ, ಗುತ್ತಿಗೆದಾರ ಕೇಂಪರಾಜು, ತಾ.ಪಂ. ಮಾಜಿ ಅಂಕನಾಯಕ, ಕಾಮ್ಯ ಮಹದೇವನಾಯಕ, ಬಿ ಆರ್ ಸಿ ಗಿರೀಶ್ ಮೂರ್ತಿ, ಪಿಡಿಒ ಯೋಗೇಂದ್ರ,ಮುಖ್ಯ ಶಿಕ್ಷಕಿ ರಶ್ಮಿ, ಇನ್ನೂ ಮುಖಂಡರು ಸೇರಿದಂತೆ ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


