ತಿಪಟೂರು: ತಾಲೂಕಿನ ಕಸಬಾ ಹೋಬಳಿಯ ರಾಮಶೆಟ್ಟಿಹಳ್ಳಿ ಗ್ರಾಮದ ಕುರಿಗಾಹಿ ರಾಜಣ್ಣ ಎಂಬವರ ಮೇಲೆ, ಹೊಲದಲ್ಲಿ ಕುರಿ ಮೇಯಿಸುವಾಗ ಚಿರತೆ ದಾಳಿ ಮಾಡಿರುವ ಘಟನೆ ನಡೆದಿದೆ.
ಕೈ ಮತ್ತು ಕೆಲವು ಅಂಗಾಂಗಗಳ ಮೇಲೆ ಕಚ್ಚಿ ಚಿರತೆ ಗಾಯಗೊಳಿಸಿದ್ದು, ಈ ವೇಳೆ ಕುರಿಗಾಹಿ ಕೂಗಿಕೊಂಡಾಗ ಚಿರತೆ ಸ್ಥಳದಿಂದ ಪರಾರಿಯಾದ ಕಾರಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾರ್ವಜನಿಕರ ಆಕ್ರೋಶ: ಪದೇಪದೇ ನಮ್ಮ ಗ್ರಾಮ ಮತ್ತು ಜಮೀನುಗಳಲ್ಲಿ ಓಡಾಡಲು ತುಂಬಾ ಕಷ್ಟವಾಗುತ್ತಿದೆ, ಹಗಲು ಮತ್ತು ರಾತ್ರಿ ವೇಳೆ ಚಿರತೆಗಳ ದಾಳಿ ಮುಂದುವರೆದಿದ್ದು, ಅರಣ್ಯ ಇಲಾಖೆಗೆ ತಿಳಿಸಿದರು, ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಗ್ರಾಮಸ್ಥರ ಆಕ್ರೋಶವಾಗಿದೆ.
ವರದಿ: ಆನಂದ, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


