ತುಮಕೂರು: ನಗರೀಕರಣ, ಕೈಗಾರಿಕೀಕರಣದ ಹೆಸರಿನಲ್ಲಿ ಜಲಮೂಲ, ನದಿಪಾತ್ರ ಬರಿದು ಮಾಡಿದರೆ ಮನುಕುಲ ಸೇರಿದಂತೆ ಇಡೀ ಜೀವ ಸಂಕುಲವೇ ಅಪಾಯಕ್ಕೆ ಸಿಲುಕಲಿದೆ ಎಂದು ಜಲಸಂಪನ್ಮೂಲ ಇಲಾಖೆ ನಿವೃತ್ತ ಕಾರ್ಯದರ್ಶಿ ಕೆ.ಜೈಪ್ರಕಾಶ್ ಎಚ್ಚರಿಸಿದರು.
ನಗರದ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈಚೆಗೆ ಎಂಜಿನಿಯರುಗಳ ಸಂಸ್ಥೆ (ಐಇಐ) ಸಹಯೋಗದಲ್ಲಿ ಉತ್ತಮ ಜಗತ್ತು ರೂಪಿಸಲು ಸ್ಮಾರ್ಟ್ ಎಂಜಿನಿಯರಿಂಗ್ ಹಾಗೂ ರಾಜ್ಯದ ನೀರಿನ ಪರಿಸ್ಥಿತಿ ಕುರಿತು ಮಾತನಾಡಿದರು. ಜನಸಂಖ್ಯೆ ಬೆಳೆಯುತ್ತಲೇ ಸಾಗಿದ್ದು, ನೀರಿಗೆ ಬೇಡಿಕೆ ಹೆಚ್ಚುತ್ತಿದೆ. ಇರುವ ಜಲಮೂಲವನ್ನು ಮಾಲಿನ್ಯ ರಹಿತವಾಗಿ ಸಂರಕ್ಷಿಸಿ ಸದ್ಬಳಕೆ ಮಾಡಿಕೊಳ್ಳಬೇಕು. ಈ ದಿಸೆಯಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ
ಎಂಜಿನಿಯರುಗಳ ಪಾತ್ರ ಪ್ರಮುಖವಾಗಿದೆ. ನೀರಿನ ಸಂರಕ್ಷಣೆ ವಿಚಾರದಲ್ಲಿ ಎಚ್ಚರಿಕೆಯಿಂದ ಯೋಜನೆ ರೂಪಿಸಿ ಕಾರ್ಯ ರೂಪಕ್ಕೆ ತರಬೇಕು ಎಂದರು.
ಎಸ್ ಐಟಿ ಸಿಇಒ ಶಿವಕುಮಾರಯ್ಯ, ಪ್ರಾಂಶುಪಾಲ ಪ್ರೊ.ಎಸ್.ವಿ.ದಿನೇಶ್, ಐಇಐ ಅಧ್ಯಕ್ಷ ಆರ್.ಸುರೇಶ್, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಪವನ್ ಕುಮಾರ್, ಆನಂದ್, ಮಾದವ್, ಗಣೇಶ್, ತಿರುಮಲೇಶ್ ಉಪಸ್ಥಿತರಿದ್ದರು. ಪವನ್‌ಕುಮಾರ್ ಯಮ್ಮಿ ಸ್ವಾಗತಿಸಿ, ರೂಪ ನಿರೂಪಿಸಿ ಎನ್.ಚಕ್ರವರ್ತಿ ವಂದಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


