ತುಮಕೂರು: ಸೃಜನ ವೇದಿಕೆ ತುಮಕೂರು, ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು, ದಿ. ಶ್ರೀ ಮತಿ ಲತಾ ಜಿ.ಕುಲಕರ್ಣಿ ಸಾಂಸ್ಕೃತಿಕ ವೇದಿಕೆ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 7ರಂದು ಮಧ್ಯಾಹ್ನ 3 ಗಂಟೆಗೆ ಕನ್ನಡ ಭವನದಲ್ಲಿ ವಿದ್ಯಾವಾಚಸ್ಪತಿ ದಿ.ಡಾ.ಕವಿತಾಕೃಷ್ಣ ಸ್ಮರಣಾರ್ಥ ಕನ್ನಡ ಗೀತೆಗಳ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.
ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪ್ರಜಾಪ್ರಗತಿ ಸಂಪಾದಕ ಡಾ.ಎಸ್.ನಾಗಣ್ಣ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಆಗಮಿಸಲಿದ್ದಾರೆ.
ಸೃಜನ ವೇದಿಕೆ ಅಧ್ಯಕ್ಷರಾದ ಸುಶೀಲಾ ಸದಾಶಿವಯ್ಯ ಆಶಯ ನುಡಿಗಳನ್ನಾಡುವರು. ಅತಿಥಿಗಳಾಗಿ ಜಿ.ಕೆ.ಕುಲಕರ್ಣಿ, ಡಾ.ಎಸ್.ನಟರಾಜ್, ಡಾ.ಕೆ.ಬಿ.ಭರತ್ ರಾಜ್, ಗಣಪತಿ ಹೆಗಡೆ, ಅಬ್ಬಿನಹೊಳೆ ಸುರೇಶ್ ಅವರುಗಳು ಆಗಮಿಸುವರು.
ಗೀತ ಗಾಯನದಲ್ಲಿ ಮುದ್ದೇನಹಳ್ಳಿ ನಂಜಯ್ಯ, ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ, ಡಾ.ಎಸ್.ಪಿ.ಪದ್ಮಪ್ರಸಾದ್, ಜಿ.ಕೆ.ಕುಲಕರ್ಣಿ, ಬಾ.ಪು. ಜಯದೇವಯ್ಯ, ಗಣಪತಿ ಹೆಗಡೆ, ಬಾ.ಹ. ರಮಾಕುಮಾರಿ, ಡಾ.ಬಿ.ಸಿ.ಶೈಲಾನಾಗರಾಜ್, ಸಿ.ಎನ್.ಗುಣಾದೇವಿ, ಡಾ.ಕೆ.ಬಿ. ಭರತ್‌ರಾಜ್, ಡಾ.ಗಂಗಾಧರ ಕೊಡ್ಡಿಯವರ, ಡಾ.ಪ್ರಕಾಶ್ ನಾಡಿಗ್, ಕಮಲಾ ಬಡ್ಡಿಹಳ್ಳಿ, ವಿ.ಪಿ.ಕೃಷ್ಣಮೂರ್ತಿ, ಡಾ.ಕೆ.ಬಿ. ರಂಗಸ್ವಾಮಿ, ಕಮಲಾ ರಾಜೇಶ್, ಕೃಷ್ಣಾಬಾಯಿ ಹಾಗಲವಾಡಿ, ಅಬ್ಬಿನಹೊಳೆ ಸುರೇಶ್, ಹರ್ಷ, ಸಿದ್ದಾರ್ಥ ನಂಜಪ್ಪ, ಸುಮಾ ಶ್ರೀ ಹರ್ಷ, ಸುಶೀಲ ಸದಾಶಿವಯ್ಯ, ಮನೋಜ್, ಕು.ಪ್ರೇಕ್ಷಾ ಕವಿಗಳಾಗಿ ಭಾಗವಹಿಸುವರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


