ತುಮಕೂರು: ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಡಿಸೆಂಬರ್ ಮಾಹೆಯಲ್ಲಿ ಆಹಾರ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಸೌಮ್ಯ ತಿಳಿಸಿದ್ದಾರೆ.
ಆಹಾರ ಅದಾಲತ್ ಕಾರ್ಯಕ್ರಮವು ಡಿಸೆಂಬರ್ 8ರಂದು ಗುಬ್ಬಿ ತಾಲ್ಲೂಕು ಕಸಬಾ ಹೋಬಳಿ ಜಿ. ಹೊಸಹಳ್ಳಿ, ಡಿಸೆಂಬರ್ 10ರಂದು ತುಮಕೂರು ನಗರದ ದಿಟ್ಟೂರು, ಡಿಸೆಂಬರ್ 12ರಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿ ಕೆರೆ ಹೋಬಳಿ ಸಿದ್ದರಾಮನಗರ, ಡಿಸೆಂಬರ್ 15ರಂದು ತಿಪಟೂರು ತಾಲ್ಲೂಕು ನೊಣವಿನಕೆರೆ ಹೋಬಳಿ ಬಜಗೂರು ಗ್ರಾಮ, ಡಿಸೆಂಬರ್ 17ರಂದು ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಚಿಕ್ಕನಹಳ್ಳಿ, ಡಿಸೆಂಬರ್ 18ರಂದು ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಹೋಬಳಿ ದೊಡ್ಡದಾಳವಟ್ಟ ಡಿಸೆಂಬರ್ 20ರಂದು ತುಮಕೂರು ಗ್ರಾಮಾಂತರ ಕಸಬಾ ಹೋಬಳಿ ಊರುಕೆರೆ, ಡಿಸೆಂಬರ್ 22ರಂದು ತುರುವೇಕೆರೆ ಪಟ್ಟಣದ ಲಯನ್ಸ್ ಕ್ಲಬ್, ಡಿಸೆಂಬರ್ 24ರಂದು ಪಾವಗಡ ತಾಲ್ಲೂಕು ನಿಡಗಲ್ಲು ಹೋಬಳಿ ಮಂಗಳವಾಡ, ಡಿಸೆಂಬರ್ 29ರಂದು ಕುಣಿಗಲ್ ತಾಲ್ಲೂಕು ಕೊತ್ತಗೆರೆ ಹೋಬಳಿ ಭಕ್ತರಹಳ್ಳಿ ಹಾಗೂ ಡಿಸೆಂಬರ್ 31ರಂದು ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿಯಲ್ಲಿ ನಿಗದಿತ ಸ್ಥಳ ಹಾಗೂ ದಿನಾಂಕದಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


