ಸರಗೂರು: ತಾಯಿ ಚಿಕ್ಕದೇವಮ್ಮನ ಬೆಟ್ಟ–ಇಟ್ನ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕರು, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷರಾದ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ಇಟ್ನಾ ಗ್ರಾಮದಲ್ಲಿ ಶನಿವಾರ 50 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, ರಸ್ತೆಯು ಕಿರಿದಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಲಿದೆ. ಗ್ರಾಮಸ್ಥರು ಸಮಸ್ಯೆ ಬಗೆಹರಿಸಿಕೊಂಡ ಬಳಿಕ ಕಾಮಗಾರಿ ಆರಂಭಿಸಬೇಕು. ನನೆಗುದಿಗೆ ಬಿದ್ದ ರಸ್ತೆ ಡಾಂಬರೀಕರಣವನ್ನು ಗುಣಮಟ್ಟದಿಂದ ಮಾಡಬೇಕು ಎಂದು ಸೂಚನೆ ನೀಡಿದರು.
ನೂತನ ತಾಲ್ಲೂಕು ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಲಾಗುವುದು. ಅಂಗನವಾಡಿ ಮಂಜೂರು ಮಾಡಿಸಿಕೊಡಲಾಗುವುದು. ಗ್ರಂಥಾಲಯ ನಿರ್ಮಾಣ ಸೇರಿದಂತೆ ಗ್ರಾಮದ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು. ಇಟ್ನ ಗ್ರಾಮವೆಂದರೆ ತಂದೆ ದಿ.ಚಿಕ್ಕಮಾದು ಅವರಿಗೆ ತುಂಬಾ ಗೌರವ. ನನ್ನ ಗೆಲುವಿಗೂ ಶಕ್ತಿಮೀರಿ ಶ್ರಮಿಸಿದ್ದೀರಿ. ಹೀಗಾಗಿ ಗ್ರಾಮದ ಅಭಿವೃದ್ಧಿಗೂ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.
ಕ್ಷೇತ್ರದ ಪ್ರತಿ ಗ್ರಾಮಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನೀಡಲಾಗಿದ್ದು, ಅ ಪೈಕಿ ಸಿಸಿ ರಸ್ತೆ, ಚರಂಡಿ, ಭವನ ನಿರ್ಮಾಣ, ಸೇರಿದಂತೆ ಹತ್ತಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಜನಪರ ಕೆಲಸ ಮಾಡಲಾಗಿದೆ. ಶಾಸಕ ಅನಿಲ್ ಚಿಕ್ಕಮಾದು ಕ್ಷೇತ್ರಕ್ಕೆ ಮಾಡಲಾದ ಕೆಲಸಗಳು ಕ್ಷೇತ್ರ ಜನರಿಗೆ ಗೊತ್ತಿದೆ. ನನ್ನ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಹೀಗಾಗಿ ಗ್ರಾಮಸ್ಥರು ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಹಕಾರ ನೀಡಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಜಯರಾಮ್ ಮಾತನಾಡಿ, ಗ್ರಾಮದ ಸಮಸ್ಯೆಗಳ ಕುರಿತು ಶಾಸಕರಲ್ಲಿ ಮನವಿ ಪತ್ರ ನೀಡಿದರು. ಗ್ರಾಪಂ ಅಧ್ಯಕ್ಷ ಚನ್ನನಾಯಕ, ಸದಸ್ಯರಾದ ಕಾಳಿಂಗನಾಯಕ, ಜಯರಾಮ್, ಆದಿ ಕರ್ನಾಟಕ ಮಹಾಸಭಾದ ಅಧ್ಯಕ್ಷ ಇಟ್ನರಾಜಣ್ಣ, ಯಜಮಾನರಾದ ನಿಂಗರಾಜು, ಬೆಟ್ಟನಾಯಕ, ಚಿನ್ನನಾಯಕ, ಚಿಕ್ಕದೇವಮ್ಮನ ಟ್ರಸ್ಟ್ ಅಧ್ಯಕ್ಷ ದೊಡ್ಡವೀರನಾಯಕ, ಡೈರಿ ಬೆಟ್ಟನಾಯಕ, ಹೂವಿನ ಈರನಾಯಕ, ಮಾಜಿ ಯಜಮಾನರಾದ ಕೆ.ನಾಗರಾಜು, ರಾಮನಾಯಕ, ರವಿಕುಮಾರ್, ಪಿಡಿಒ ಚಿನ್ನಸ್ವಾಮಿ, ವನಸಿರಿ ಉಮೇಶ್, ಶಶಿಪಾಟೀಲ್, ಸೌಮ್ಯಮಂಜುನಾಥ್, ನವೀನ್, ಯತಿರಾಜ್, ಮಹಾಸಾಗರ್ ಸೇರಿದಂತೆ ಇಟ್ನ ಗ್ರಾಮಸ್ಥರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


