ಪ್ರತಿಭಾ ಕಾರಂಜಿ: ಸಹನಾ ಶಾಲೆ ರಾಜ್ಯ ಮಟ್ಟಕೆ ಆಯ್ಕೆ
ಪಾವಗಡ: ಮಧುಗಿರಿ ಸಿದ್ದಾರ್ಥ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಾವಗಡ ತಾಲ್ಲೂಕು ಕೋಟಗುಡ್ಡ ಸಹನಾ ಶಾಲೆಯ ವಿದ್ಯಾರ್ಥಿಗಳಾದ ದೀಪ್ತಿ ರೆಡ್ಡಿ ಕನ್ನಡ ಭಾಷಣದಲ್ಲಿ ಹಾಗೂ ಚಂದನ ಕುಮಾರಿ ಹಿಂದಿ ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಮುಖ್ಯಶಿಕ್ಷರಾದ ಎಸ್. ನರಸಿಂಹಪ್ಪ ಹಾಗೂ ಮಾರ್ಗದರ್ಶಕ ಶಿಕ್ಷಕಿಯರಾದ ಲೀಲಾವತಿ, ಶ್ವೇತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಕ್ವಿಝ್: ಸಹನಾ ಶಾಲೆ ಪ್ರಥಮ
ಪಾವಗಡ: ತಾಲ್ಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟ ಹಾಗೂ ವಿ.ಎಸ್.ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಹಯೋಗದೊಂದಿಗೆ ನಡೆದ ತಾಲ್ಲೂಕು ಮಟ್ಟದ ಹತ್ತನೇ ತರಗತಿಯ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಕೋಟಗುಡ್ಡ ಸಹನಾ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದಿರುತ್ತಾರೆ.
ವಿಜೇತ ವಿದ್ಯಾರ್ಥಿಗಳನ್ನು ಆಡಳಿತಾಧಿಕಾರಿಗಳಾದ ಎನ್. ಶ್ರೀನಿವಾಸ್ ಮುಖ್ಯಶಿಕ್ಷಕರಾದ ಎಸ್. ನರಸಿಂಹಪ್ಪ ಶಿಕ್ಷಕರಾದ ಜೀನಿಷ್, ಜೀಜೊ, ಲೀಲಾವತಿ, ಮಮತ, ಶ್ವೇತಾ, ಮರಿಯಾ, ಅಭಿನಂದಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


