ಬೀದರ್: ಔರಾದ ತಾಲೂಕಿನಲ್ಲಿ ಜೆಜೆಎಂ ಕಾಮಗಾರಿ ಕಳಪೆ ಮಟ್ಟದಿಂದ ಆಗಲು, ಯೋಜನೆಯ ದಿಕ್ಕು ತಪ್ಪಲು ಸ್ಥಳೀಯ ಶಾಸಕ ಪ್ರಭು ಚವ್ಹಾಣ್ ಅವರೇ ನೇರ ಕಾರಣರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಾದ ಸುಧಾಕರ್ ಕೊಳ್ಳುರ ಆರೋಪಿಸಿದ್ದಾರೆ .
ಪತ್ರಿಕೆ ಹೇಳಿಕೆ ನೀಡಿರುವ ಅವರು, ಜೆಜೆಎಂ ಕಾಮಗಾರಿಯ ಕೆಲಸ ಮಾಡಿದ ಗುತ್ತಿಗೆದಾರರೆಲ್ಲ ಶಾಸಕರ ಆಪ್ತರೇ ಆಗಿದ್ದಾರೆ, ಅದರಲ್ಲಿ ಬಹುತೇಕ ಗುತ್ತಿಗೆದಾರರು ಶಾಸಕರ ಕಾರ್ಯಕರ್ತರೇ ಆಗಿದ್ದಾರೆ. ಕಾಮಗಾರಿ ಪ್ರಾರಂಭಿಸುವ ಸಂದರ್ಭದಲ್ಲಿ ಪೂಜೆ ನೆರವೇರಿಸಿದ್ದು ಕೂಡ ಶಾಸಕರೇ, ನಂತರ ಕಾಮಗಾರಿ ಸರಿಯಾಗಿ ನಡಿತಾ ಇದೆಯೋ ಇಲ್ಲವೋ ಅನ್ನೋದನ್ನ ವೀಕ್ಷಿಸಿದ್ದು ಕೂಡ ಶಾಸಕರೆ ! ಇದೀಗ ಕಾಮಗಾರಿ ಸರಿಯಾಗಿ ಆಗಿಲ್ಲ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸರಿಯಾಗಿ ಕಾಮಗಾರಿ ಮಾಡಿಲ್ಲ ಕಳಪೆ ಮಟ್ಟದಿಂದ ಆಗಿದೆ ಎಂದು ಆರೋಪ ಮಾಡುತ್ತಿರುವುದು ಶಾಸಕರೇ. ಹಾಗಾದರೆ ಶಾಸಕರು ಕಾಮಗಾರಿ ವೀಕ್ಷಿಸಿದ್ದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ.
ಶಾಸಕರು ಕೂಡ ಈ ಕಾಮಗಾರಿ ವಿಫಲಗೊಳ್ಳಲು ನೇರ ಕಾರಣರಾಗಿದ್ದಾರೆ, ಈ ಭ್ರಷ್ಟಾಚಾರದಲ್ಲಿ ಶಾಸಕರ ಪ್ರಭು ಚೌಹಾಣ್ ಅವರ ಪಾತ್ರವು ಪ್ರಮುಖವಾಗಿದೆ, ಸುಮಾರು ಎರಡು ನೂರು ಕೋಟಿ ರೂಪಾಯಿ ಅನುದಾನ ಖರ್ಚಾದರೂ ತಾಲೂಕಿನ ಜನರಿಗೆ ಹನಿ ನೀರು ಸಿಗುತ್ತಿಲ್ಲ, ಜನರು ಶಾಸಕರ ಮತ್ತು ಅಧಿಕಾರಿಗಳ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ, ದೇವರು ವರ ಕೊಟ್ರು ಪೂಜಾರಿ ವರ ಕೊಡಲಿಲ್ಲ ಅನ್ನುವ ಹಾಗೆ ಸರ್ಕಾರ ಎಷ್ಟೇ ಅನುದಾನದ ನೀಡಿದರೂ, ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಸೇರಿಕೊಂಡು ಯೋಜನೆ ದುರ್ಬಳಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಇಂಥ ಶಾಸಕರ ಭ್ರಷ್ಟಾಚಾರಕ್ಕೆ ತಾಲೂಕಿನ ಜನ ಬಲಿಯಾಗುತ್ತಿದ್ದಾರೆ ಮತ್ತು ಇವರ ತಾಳಕ್ಕೆ ತಕ್ಕಂತೆ ಕುಣಿದು ಅಧಿಕಾರಿಗಳು ಬಲಿ ಪಶು ಆಗುತ್ತಿದ್ದಾರೆ ಎಂದು ಸುಧಾಕರ್ ಕೊಳ್ಳುರ ಆರೋಪಿಸಿದಾರೆ.
ಶಾಸಕರಿಗೆ ನಿಜವಾಗಲೂ ಕಳಕಳಿ ಇದ್ದರೆ ! ಆಗಿರುವ ತಪ್ಪುಗಳನ್ನು ಸರಿ ಮಾಡಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು. ಅದನ್ನು ಬಿಟ್ಟು ಈ ರೀತಿಯ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿಕೊಂಡರೆ ತಾವು ಮಾಡಿದ ತಪ್ಪು ಮುಚ್ಚಿ ಹೋಗುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


